ಹಿಜಾಬ್‌ ತೀರ್ಪು ತೀವ್ರ ನಿರಾಸೆ ತಂದಿದೆ: ಒಮರ್​ ಅಬ್ದುಲ್ಲಾ, ಮೆಹಬೂಬಾ ಮುಫ್ತಿ ಟ್ವೀಟ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:
ರಾಜ್ಯದಲ್ಲಿ ತೀವ್ರ ಚರ್ಚೆ ಹುಟ್ಟುಹಾಕಿದ್ದ ಹಿಜಾಬ್‌ ತೀರ್ಪು ಹೊರಬಿದ್ದಿದ್ದು, ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್​ ಧರಿಸುವಂತಿಲ್ಲ ಎಂದು ರಾಜ್ಯ ಹೈಕೋರ್ಟ್​ ಸ್ಪಷ್ಟವಾಗಿ ನಿರ್ದೇಶನ ನೀಡಿದೆ. ಹಿಜಾಬ್‌ ತೀರ್ಪಿನ ಕುರಿತು ರಾಜ್ಯ, ರಾಷ್ಟ್ರದ ಅನೇಕ ನಾಯಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಬಹುತೇಕರು ತೀರ್ಪನ್ನು ಸ್ವಾಗತಿಸಿದ್ದಾರೆ.
ಈ ನಡುವೆ ಜಮ್ಮು-ಕಾಶ್ಮೀರದ ನ್ಯಾಶನಲ್​ ಕಾನ್ಫರೆನ್ಸ್ ಪಕ್ಷದ ಒಮರ್​ ಅಬ್ದುಲ್ಲಾ ಹಾಗೂ ಪಿಡಿಪಿ ಪಕ್ಷದ ಮೆಹಬೂಬಾ ಮುಫ್ತಿ ಅವರು ಟ್ವೀಟ್‌ ಮುಖೇನ ಪ್ರತಿಕ್ರಿಯೆ ನೀಡಿದ್ದು, ನ್ಯಾಯಾಲಯದ ಆದೇಶ ತಮಗೆ ತೀವ್ರ ನಿರಾಸೆ ತಂದಿದೆ ಎಂದಿದ್ದಾರೆ.
ಟ್ವೀಟ್ ಮೂಲಕ ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ಒಮರ್​ ಅಬ್ದುಲ್ಲಾ ಹೈಕೋರ್ಟ್‌ ತೀರ್ಪು ನಿರಾಸೆ ತಂದಿದೆ. ಹಿಜಾಬ್​ ಅನ್ನು ಮಹಿಳೆ ಧರಿಸಲು ಇಷ್ಟಪಡುತ್ತಾಳೆ ಎಂದರೆ ಅದು ಆಕೆಯ ಆಯ್ಕೆಯ ಹಕ್ಕಾಗಿರುತ್ತದೆ. ಇಂಥ ಮೂಲಭೂತ ಹಕ್ಕನ್ನು ಕೋರ್ಟ್ ಪುರಸ್ಕರಿಸದಿರುವುದು ದುರಾದೃಷ್ಟಕರ ಎಂದಿದ್ದಾರೆ.

ಮೆಹಬೂಬಾ ಮುಫ್ತಿ ಟ್ವೀಟ್ ಮಾಡಿ, , ಹಿಜಾಬ್‌ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ನೀಡಿದ ತೀರ್ಪು ನಿಜಕ್ಕೂ ನಿರಾಸೆ ಮೂಡಿಸಿದೆ. ಮಹಿಳಾ ಸಬಲೀಕರಣದ ಬಗ್ಗೆ ಮಾತುಗಳನ್ನಾಡುತ್ತಲೇ ಆಕೆಯ ಹಕ್ಕುಗಳು, ಆಯ್ಕೆಯನ್ನು ನಿರಾಕರಿಸಲಾಗುತ್ತಿದೆ. ಈ ಮೂಲಕ ಮುಸ್ಲಿಂ ಹೆಣ್ಣುಮಕ್ಕಳ ಆಯ್ಕೆ ಹಕ್ಕನ್ನು ದಮನ ಮಾಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!