Sunday, June 26, 2022

Latest Posts

ಅಮೆರಿಕ, ಜರ್ಮನ್​​ ಸೇರಿದಂತೆ 40 ದೇಶಗಳಲ್ಲಿ ಒಮಿಕ್ರಾನ್‌ ಪತ್ತೆ!

ಹೊಸ ದಿಗಂತ ಡಿಜಿಟಲ್‌ ಡೆಸ್ಕ್:‌

ದಿನದಿಂದ ದಿನಕ್ಕೆ ವಿಶ್ವದ ಹಲವು ರಾಷ್ಟ್ರಗಳಲ್ಲಿ ಒಮಿಕ್ರಾನ್‌ ಸೋಂಕು ಪ್ರಕರಣಗಳು ಹೆಚ್ಚುತ್ತಿದ್ದು, ಭಾರತದಲ್ಲಿಯೂ ಸಹ ಈಗಾಗಲೇ ಒಮಿಕ್ರಾನ್‌ ಪ್ರಕರಣ ಪತ್ತೆಯಾಗಿದೆ. ಹೀಗಾಗಿ ಭಾರತ ಸೇರಿದಂತೆ ಅನೇಕ ದೇಶಗಳು ಈ ರೂಪಾಂತರಿ ಹರಡುವಿಕೆ ತಡೆಗಟ್ಟಲು ಕಠಿಣ ನಿಯಗಳ ಜಾರಿಗೆ ಮುಂದಾಗಿವೆ.

ಯಾವೆಲ್ಲ ದೇಶದಲ್ಲಿ ಎಷ್ಟೆಷ್ಟು ಒಮಿಕ್ರಾನ್‌ ಪ್ರಕರಣ ಪತ್ತೆ?

ದಕ್ಷಿಣ ಆಫ್ರಿಕಾ 227, ಇಂಗ್ಲೆಂಡ್​​ 74, ಜರ್ಮನ್​​ 51, ಬೋಟ್ಸ್​​​ವಾನ್​ 21, ಬೆಲ್ಜಿಯಂ 6, ಆಸ್ಟ್ರೇಲಿಯಾ 11, ಪೋರ್ಚುಗಲ್​ 13, ಇಟಲಿ 4, ಜೆಕ್​ ಗಣರಾಜ್ಯ 1, ಡೆನ್ಮಾರ್ಕ್​ 2, ಆಸ್ಟ್ರಿಯಾ 11, ಕೆನಡಾ 10, ಸ್ವೀಡನ್ 1, ಸ್ವಿಟ್ಜರ್​​ಲೆಂಡ್ 6, ಸ್ಪೇನ್​ 7,  ಜಪಾನ್​ 2, ಫ್ರಾನ್ಸ್​ 4, ಘಾನಾ 33, ದಕ್ಷಿಣ ಕೊರಿಯಾ 3, ನೈಜೀರಿಯಾ 3, ಬ್ರೆಜಿಲ್​ 2, ಅಮೆರಿಕ 16, ಭಾರತದ 4 ಮಂದಿ ಸೇರಿದಂತೆ 40 ದೇಶಗಳಲ್ಲಿ ಒಮಿಕ್ರಾನ್ ಸೋಂಕು ದೃಢಪಟ್ಟಿದೆ.

ಒಮಿಕ್ರಾನ್‌ ತಳಿ ಮೊದಲು ಪತ್ತೆಯಾಗಿದ್ದ ದಕ್ಷಿಣ ಆಫ್ರಿಕಾದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ನವೆಂಬರ್ 29ರಂದು 2,273 ಕೋವಿಡ್‌ ಪ್ರಕರಣಗಳು ದೃಢಪಟ್ಟಿತ್ತು, ಡಿಸೆಂಬರ್ 3ರ ಹೊತ್ತಿಗೆ ಈ ಸಂಖ್ಯೆ 16,055ಕ್ಕೆ ಏರಿಕೆಯಾಗಿದೆ. ಈ ಮೂಲಕ ಕಳೆದ ನಾಲ್ಕು ದಿನಗಳಲ್ಲಿ ಆರು ಪಟ್ಟು ಕೊರೋನಾ ಸೋಂಕಿತರ ಸಂಖ್ಯೆ ಏರಿಕೆಯಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss