ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕದಲ್ಲಿ ಕೋವಿಡ್ ರೂಪಾಂತರಿ ಸೋಂಕು ಒಮಿಕ್ರಾನ್ ನ ಆರ್ಭಟ ಹೆಚ್ಚಾಗಿದ್ದು, ಇದರ ಪರಿಣಾಮ ಡೆಲ್ಟಾ ಸೋಂಕಿಗಿಂತ ಅತಿ ಹೆಚ್ಚು ಸಾವುಗಳನ್ನು ವರದಿ ಮಾಡಿದೆ.
ಮುಂದಿನ ಕೆಲ ದಿನಗಳು ಅಥವಾ ವಾರಗಳ ಕಾಲ ಈ ಒಮಿಕ್ರಾನ್ ಆರ್ಭಟ ಮುಂದುವರೆಯಲಿದೆ ಎಂದು ಅಲ್ಲಿನ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಅಮೆರಿಕದಲ್ಲಿ ಕಳೆದ ನವೆಂಬರ್ ನಲ್ಲಿನ ಡೆಲ್ಟಾ ರೂಪಾಂತರಿ 2,100 ಮಂದಿ ಮೃತಪಟ್ಟಿದ್ದರೆ, ಈಗ ಒಮಿಕ್ರಾನ್ ಒಂದೇ ದಿನ 2,267 ಮಂದಿಯನ್ನು ಬಲಿಪಡೆದಿದೆ.
ಒಮಿಕ್ರಾನ್ ಕಡಿಮೆ ಪರಿಣಾಮಕಾರಿಯಾಗಿದ್ದರೂ, ಅಮೆರಿಕದಲ್ಲಿ ಪತ್ತೆಯಾಗುತ್ತಿರುವ ಎಲ್ಲಾ ರೀತಿಯ ಸೋಂಕಿಗೂ ಒಮಿಕ್ರಾನ್ ಕಾರಣ ಎಂದು ಅಂದಾಜಿಸಲಾಗಿದೆ. ಇದರಿಂದ ಹೆಚ್ಚು ಜನ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದು, ಮೃತಪಡುತ್ತಿದ್ದಾರೆ. ಈ ಮೂಲಕ ಅಮೆರಿಕ ಒಂದು ಮಿಲಿಯನ್ ಮಂದಿಯ ಸಾವಿಗೆ ಕಾರಣವಾಗಲಿದೆ.
ಈಗಾಗಲೇ ಅಮೆರಿಕದಲ್ಲಿ 8,78,000ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದು, ಕೋವಿಡ್ ನಿಂತ ಮೃತಪಟ್ಟವರ ಅತಿ ಹೆಚ್ಚು ಸಂಖ್ಯೆಯನ್ನು ಹೊಂದಿದೆ.
ನ್ಯೂಜೆರ್ಸಿ, ಪೆನ್ಸಿಲ್ವೇನಿಯಾ, ಅಯೋವಾ, ಮೇರಿಲ್ಯಾಂಡ್, ಅಲಾಸ್ಕಾ ಮತ್ತು ಜಾರ್ಜಿಯಾ ರಾಜ್ಯಗಳಲ್ಲಿ ಸಾವಿನ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ.