spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Friday, January 28, 2022

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಕರ್ನಾಟಕದಿಂದಲೇ ಪತ್ತೆಯಾದ ದೇಶದ ಮೊದಲ ಒಮಿಕ್ರಾನ್ ಪ್ರಕರಣ

- Advertisement -Nitte

ಹೊಸದಿಗಂತ ಡಿಜಿಟಲ್ ಡೆಸ್ಕ್:

ದಕ್ಷಿಣ ಆಫ್ರಿಕಾದ ಕೋವಿಡ್ ರೂಪಾಂತರಿ ತಳಿಯಾಗಿರುವ ಒಮಿಕ್ರಾನ್ ಈಗ ಭಾರತದಲ್ಲಿ ಕಾಣಿಸಿಕೊಂಡಿದೆ.
ಈ ಬಗ್ಗೆ ಮಾಹಿತಿ ನೀಡಿದ ಕೇಂದ್ರ ಆರೋಗ್ಯ ಇಲಾಖೆಯ ಜಂಟಿ ಕಾರ್ಯದರ್ಶಿ ಲವ ಅಗರ್ವಾಲ್, ದಕ್ಷಿಣ ಆಫ್ರಿಕಾದಿಂದ ಕರ್ನಾಟಕಕ್ಕೆ ಬಂದ ಇಬ್ಬರಲ್ಲಿ ಒಮಿಕ್ರಾನ್ ಸೋಂಕು ದೃಢಪಟ್ಟಿದೆ. ಒಮಿಕ್ರಾನ್ ಸೋಂಕಿತರಲ್ಲಿ ಈವರೆಗೆ ಕೇವಲ ಸೂಕ್ಷ್ಮ ರೀತಿಯ ಲಕ್ಷಣಗಳು ಕಾಣಿಸಿಕೊಂಡಿದೆ. ವಿಶ್ವ ಆರೋಗ್ಯ ಸಂಸ್ಥೆ ಈ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸಲಿದೆ ಎಂದರು.
46 ವರ್ಷದ ವ್ಯಕ್ತಿ ಹಾಗೂ 66 ವರ್ಷದ ವೃದ್ಧರೊಬ್ಬರಲ್ಲಿ ಈ ಒಮಿಕ್ರಾನ್ ಸೋಂಕು ಪತ್ತೆಯಾಗಿದೆ. ಇದರ ಸ್ವಾಬ್ ಟೆಸ್ಟ್ ಗಳಲ್ಲಿ ಕೋವಿಡ್ ಪಾಸಿಟಿವ್ ಬಂದಿದ್ದು, ಹೆಚ್ಚಿನ ಪರೀಕ್ಷೆಯಲ್ಲಿ ಒಮೆಕ್ರಾನ್ ಸೋಂಕು ತಗುಲಿರುವುದು ದೃಢಪಟ್ಟಿದೆ.
ದೇಶದಲ್ಲಿ ಪತ್ತೆಯಾಗಿರುವ ಈ ಎರಡು ಪ್ರಕರಣಗಳಲ್ಲಾಗಲೀ, ವಿದೇಶಗಳಲ್ಲಿ ವರದಿಯಾಗಿರುವ ಒಮಿಕ್ರಾನ್ ಪ್ರಕರಣಗಳಲ್ಲಾಗಲೀ ಗಾಬರಿಯಾಗುವಂತಹ ಯಾವುದೇ ರೋಗ ತೀವ್ರತೆ ಕಂಡು ಬಂದಿಲ್ಲ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಇದೇ ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದ ಐ ಸಿ ಎಂ ಆರ್ ಪ್ರಧಾನ ನಿರ್ದೇಶಕ ಬಲರಾಂ ಭಾರ್ಗವ ಅವರು ಕರ್ನಾಟಕದಿಂದ ಎರಡು ಒಮಿಕ್ರಾನ್ ಪ್ರಕರಣಗಳು ಪತ್ತೆಯಾಗಿರುವುದನ್ನು ದೃಢಪಡಿಸಿದ್ದಾರೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img

Don't Miss