ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯಲ್ಲಿ 7 ವರ್ಷದ ಮಗುವಿನಲ್ಲಿ ಒಮಿಕ್ರಾನ್ ಸೋಂಕು ದೃಢಪಟ್ಟಿದೆ.
ಪಶ್ಚಿಮ ಬಂಗಾಳದಲ್ಲಿ ದಾಖಲಾಗಿರುವ ಮೊದಲ ಒಮಿಕ್ರಾನ್ ಪ್ರಕರಣ ಇದಾಗಿದ್ದು, ಸದ್ಯ ಮಗುವನ್ನು ಐಸೋಲೇಷನ್ನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ, ಮಗುವಿನ ಪೋಷಕರ ಸೋಂಕಿನ ವರದಿ ನೆಗೆಟಿವ್ ಬಂದಿದೆ.
ಮಗುವಿನ ಟ್ರಾವೆಲ್ ಹಿಸ್ಟರಿ ನೋಡುವುದಾದರೆ, ಅಬುಧಾಬಿಯಲ್ಲಿದ್ದ ಮಗು ಮತ್ತು ಪೋಷಕರು ಮೊದಲು ಕೋಲ್ಕತ್ತಾಗೆ ಬಂದು ನಂತರ ಹೈದರಾಬಾದ್ ಮೂಲಕ ಮುರ್ಷಿದಾಬಾದ್ಗೆ ಬಂದಿರುವುದಾಗಿ ರಾಜ್ಯ ಮಾಹಿತಿ ಮತ್ತು ಸಾಂಸ್ಕೃತಿಕ ವ್ಯವಹಾರಗಳ ಇಲಾಖೆಯ ಮಾಹಿತಿ ನೀಡಿದೆ.