Saturday, June 25, 2022

Latest Posts

ಒಮಿಕ್ರಾನ್ ಭೀತಿ: ಬೂಸ್ಟರ್ ಲಸಿಕೆ ಪಡೆಯಲು ಮುಗಿಬಿದ್ದ ಅಮೆರಿಕನ್ನರು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಒಮಿಕ್ರಾನ್ ರೂಪಾಂತರಿ ತಳಿ ಭೀತಿಯಿಂದ ಹೆಚ್ಚಿನ ಸಂಖ್ಯೆಯ ಅಮೆರಿಕನ್ನರು ಕೋವಿಡ್-19 ಲಸಿಕೆಗಳ ಬೂಸ್ಟರ್ ಡೋಸ್‌ಗಳನ್ನು ಪಡೆಯಲು ಮುಗಿಬಿದ್ದಿದ್ದಾರೆ. ಹಿಂದೆಂದಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಬೂಸ್ಟರ್ ಪಡೆಯಲು ಅಮೆರಿಕನ್ನರು ಉತ್ಸುಕರಾಗಿದ್ದು, ಸರತಿ ಸಾಲಿನಲ್ಲಿ ದಿನವಿಡೀ ನಿಂತು ಬೂಸ್ಟರ್ ಡೋಸ್ ಪಡೆಯುತ್ತಿದ್ದಾರೆ.

ಒಮಿಕ್ರಾನ್ ಭೀತಿಯಿಂದ ಜನ ಬೂಸ್ಟರ್ ಡೋಸ್ ಪಡೆಯಲು ಮುಂದಾಗಿದ್ದಾರೆ ಎಂದು ಯುಎಸ್ ಸರ್ಕಾರ ತಿಳಿಸಿದೆ. ಯುಎಸ್ ನಿಯಂತ್ರಕರು ಸೆಪ್ಟೆಂಬರ್‌ನಲ್ಲಿ ಕೆಲವು ವಯಸ್ಕರಿಗೆ ಹೆಚ್ಚುವರಿ ಡೋಸ್ ಪಡೆಯಲು ಒಪ್ಪಿಗೆ ನೀಡಿದ ನಂತರ, ಕಳೆದ ಮೂರು ವಾರಗಳಿಂದ ದಿನಕ್ಕೆ ಒಂದು ಮಿಲಿಯನ್‌ಗಿಂತಲೂ ಕಡಿಮೆ ಜನರು ಬೂಸ್ಟರ್ ಡೋಸ್ ಪಡೆದಿದ್ದರು.

ಆದರೆ ಕಳೆದ ವಾರದಲ್ಲಿ ಸುಮಾರು ಏಳು ಮಿಲಿಯನ್ ಜನರು ಬೂಸ್ಟರ್ ಡೋಸ್ ಪಡೆದಿದ್ದಾರೆ. ದಿನಕ್ಕೆ ಒಂದು ಮಿಲಿಯನ್ ಬೂಸ್ಟರ್ ಶಾಟ್‌ಗಳನ್ನು ನೀಡಲಾಗುತ್ತಿದೆ. ಹಿಂದೆಂದಿಗಿಂತಲೂ ಹೆಚ್ಚು ಮಂದಿ ಬೂಸ್ಟರ್ ಶಾಟ್ ಪಡೆಯಲು ಇದೀಗ ಮುಂದೆ ಬಂದಿದ್ದಾರೆ ಎಂದು ಶ್ವೇತಭವನದ ಕೋವಿಡ್-19 ಪ್ರತಿಕ್ರಿಯೆ ಸಂಯೋಜನ ಜೆಫ್ ಜಿಯೆಂಟ್ಸ್ ತಿಳಿಸಿದ್ದಾರೆ.
ಬೂಸ್ಟರ್‌ಗೆ ಅರ್ಹರಾಗಿರುವ 65 ವರ್ಷದವರು ಹಾಗೂ ಅದಕ್ಕಿಂತ ಹೆಚ್ಚಿನ ವಯಸ್ಸಿನ ಶೇ.55ರಷ್ಟು ಜನರು ಒಂದು ಡೋಸ್ ಬೂಸ್ಟರ್ ಪಡೆದಿದ್ದಾರೆ ಎಂದು ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss