Wednesday, July 6, 2022

Latest Posts

ಮಹಾರಾಷ್ಟ್ರದಲ್ಲಿ ಒಮಿಕ್ರಾನ್‌ ತೀವ್ರತೆ ಹೆಚ್ಚಳ: ಬಿಎಂಸಿಯಿಂದ ಕಠಿಣ ನಿಯಮಗಳು ಜಾರಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಮಹಾರಾಷ್ಟ್ರದಲ್ಲಿ ಕೋವಿಡ್‌ ರೂಪಾಂತರಿ ತಳಿಯಾಗಿರುವ ಒಮಿಕ್ರಾನ್‌ ನ ಆರ್ಭಟ ಹೆಚ್ಚಾಗಿದ್ದು, ಒಂದೇ ದಿನ 11 ಹೊಸ ಪ್ರಕರಣಗಳು ವರದಿಯಾಗಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಒಮಿಕ್ರಾನ್‌ ಸೋಂಕಿತರ ಸಂಖ್ಯೆ 65ಕ್ಕೆ ಏರಿಕೆಯಾಗಿದೆ.

ಈ ಬಗ್ಗೆ ಮಾಹಿತಿ ನೀಡಿದ ಅಲ್ಲಿನ ಆರೋಗ್ಯ ಇಲಾಖೆ, ಪತ್ತೆಯಾದ 11 ಒಮಿಕ್ರಾನ್‌ ಪ್ರಕರಣಗಳಲ್ಲಿ 8 ಪ್ರಕರಗಳು ಮುಂಬೈ ವಿಮಾನ ನಿಲ್ದಾಣದಲ್ಲಿ ಸ್ಕ್ರೀನಿಂಗ್‌ ವೇಳೆ ಪತ್ತೆಯಾಗಿದೆ. ಉಳಿದಂತೆ ನವಿಮುಂಬೈ, ಪಿಂಪ್ರಿ ಚಿಂಚ್ವಾಡ್‌ ಹಾಗೂ ಒಸ್ಮಾನಾಬಾದ್‌ ನಲ್ಲಿ ತಲಾ ಒಂದೊಂದು ಪ್ರಕರಣ ಪತ್ತೆಯಾಗಿದೆ ಎಂದು ತಿಳಿಸಿದೆ.

ಕಠಿಣ ಕ್ರಮ ಕೈಗೊಂಡ ಮುಂಬೈ ಮುನ್ಸಿಪಲ್‌ ಕಾರ್ಪೊರೇಷನ್:‌

ಒಳಾಂಗಣದಲ್ಲಿ ನಡೆಯುವ ಯಾವುದೇ ಮದುವೆ, ಮೀಟಿಂಗ್‌ ಸಮಾರಂಭಗಳಿಗೆ ಶೇ.50 ರಷ್ಟು ಸಾಮರ್ಥ್ಯಕ್ಕೆ ಮಾತ್ರ ಅವಕಾಶ ನೀಡಲಾಗುತ್ತದೆ.

ಇನ್ನು ಹೊರಾಂಗಣದಲ್ಲಿ ಮಾಡುವ ಕಾರ್ಯಕ್ರಮಗಳಿಗೆ ಶೇ. 25ರಷ್ಟು ಮಂದಿಗೆ ಮಾತ್ರ ಅನುಮತಿ ನೀಡಲಾಗುತ್ತದೆ.

200ಕ್ಕಿಂತ ಹೆಚ್ಚು ಜನರು ಭಾಗಿಯಾಗುವ ಯಾವುದೇ ಸಮಾರಂಭಗಳಿಗೂ ಪೂರ್ವಾನುಮತಿ ಕಡ್ಡಾಐಘೋಳಿಸಲಾಗಿದೆ.

ಕಾರ್ಯಕ್ರಮಗಳಲ್ಲಿ ಕೋವಿಡ್‌ ಸಂಬಂಧಿತ ನಿಯಮಗಳ ಪಾಲನೆ ಕಡ್ಡಾಯ ಮಾಡಲಾಗಿದೆ.

ಈ ಮೇಲ್ಕಂಡ ನಿಯಮಗಳನ್ನು ಉಲ್ಲಂಘಿಸಿದರವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಬಿಎಂಸಿ ಎಚ್ಚರಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss