ದೆಹಲಿಯಲ್ಲಿ ಓಮಿಕ್ರಾನ್ ರೂಪಾಂತರ BF.7ನ ಯಾವುದೇ ಪ್ರಕರಣವಿಲ್ಲ: ಸಿಎಂ ಕೇಜ್ರಿವಾಲ್

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಚೀನಾದ ಪ್ರಸ್ತುತ ಕೋವಿಡ್ ಪ್ರಕರಣಗಳಿಗೆ ಕಾರಣವಾದ ಓಮಿಕ್ರಾನ್ ರೂಪಾಂತರ BF.7ನ ಯಾವುದೇ ಪ್ರಕರಣಗಳು ರಾಷ್ಟ್ರ ರಾಜಧಾನಿಯಲ್ಲಿ ಪತ್ತೆಯಾಗಿಲ್ಲ. ಆದರೂ ಜನರು ಬೂಸ್ಟರ್ ಲಸಿಕೆಯನ್ನು ಪಡೆಯುವಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಒತ್ತಾಯಿಸಿದ್ದಾರೆ.

ಸಿಎಂ ಕ್ರೇಜಿವಾಲ್ ಅವರು ಕೋವಿಡ್ -19 ಪರಿಶೀಲನಾ ಸಭೆಯ ನಡೆಸಿದ್ದು, ಸಭೆ ಬಳಿಕ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದರು.

ಚೀನಾ ಮತ್ತು ಇತರ ಹಲವು ದೇಶಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿವೆ. ದೆಹಲಿಯಲ್ಲಿ BF.7ನ ಒಂದೇ ಒಂದು ಪ್ರಕರಣವಿಲ್ಲ. ಆದ್ದರಿಂದ ಚಿಂತಿಸಬೇಕಾಗಿಲ್ಲ. ನಾವು ಜೀನೋಮ್ ಅನುಕ್ರಮವನ್ನು ಮಾಡುತ್ತಿದ್ದೇವೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.

ಕೋವಿಡ್‌ನ XBB ರೂಪಾಂತರವು ಶೇ. 92 ರಷ್ಟು ಸಕಾರಾತ್ಮಕ ಪ್ರಕರಣಗಳಿಗೆ ಕಾರಣವಾಗಿದೆ. ದೆಹಲಿಯ ಏಳು ಸ್ಥಳಗಳಿಂದ ತೆಗೆದ ಒಳಚರಂಡಿ ಮಾದರಿಗಳಲ್ಲಿಯೂ BF.7ನ ಕೇಸ್ ಪತ್ತೆಯಾಗಿಲ್ಲಎಂದು ಸಿಎಂ ಕೇಜ್ರಿವಾಲ್ ಹೇಳಿದ್ದಾರೆ.

ಕೊರೊನಾ ವೈರಸ್ ಪ್ರಕರಣಗಳು ಹೆಚ್ಚಾದರೆ ಕೋವಿಡ್ ಪರಿಸ್ಥಿತಿಯನ್ನು ಎದುರಿಸಲು ಸರ್ಕಾರ ಸಿದ್ಧವಾಗಿದೆ ಎಂದು ಕೇಜ್ರಿವಾಲ್ ದೆಹಲಿಯ ನಾಗರಿಕರಿಗೆ ಭರವಸೆ ನೀಡಿದರು.

ದೆಹಲಿಯಲ್ಲಿ ಕೋವಿಡ್‌ಗಾಗಿ 8,000 ಹಾಸಿಗೆಗಳನ್ನು ಹೊಂದಿದ್ದೇವೆ. ಈಗ, ನಾವು ಕೋವಿಡ್‌ಗೆ ಸಂಬಂಧಿಸಿದಂತೆ 36,000 ಹಾಸಿಗೆಗಳನ್ನು ಸಿದ್ಧಪಡಿಸುವ ಗುರಿಯನ್ನು ಹೊಂದಿದ್ದೇವೆ. ನಾವು ದೆಹಲಿಯಲ್ಲಿ 928 mt ಟನ್ ಆಮ್ಲಜನಕವನ್ನು ಸಂಗ್ರಹಿಸುವ ಸಾಮರ್ಥ್ಯವನ್ನು ಹೊಂದಿದ್ದೇವೆ ಎಂದು ಅವರು ಹೇಳಿದರು.

ಬುಧವಾರ ದೆಹಲಿಯಲ್ಲಿ 5 ಕೋವಿಡ್ ಕೇಸ್ ಗಳು ದೃಢಪಟ್ಟಿದ್ದು, ಒಂದು ಸಾವು ಸಂಭವಿಸಿದೆ. ಈ ಕುರಿತಂತೆ ದೆಹಲಿ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!