ಐಪಿಎಲ್‌ ಗೆ ಮತ್ತೆ ಕೊರೋನಾತಂಕ; ಡೆಲ್ಲಿ ಕ್ಯಾಪಿಟಲ್ಸ್ ಆಟಗಾರನಿಗೆ ಸೋಂಕು ದೃಢ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 
ಡೆಲ್ಲಿ ಕ್ಯಾಪಿಟಲ್ಸ್ (DC) ತಂಡವು ಇಂದು ರಾತ್ರಿ 7.30ಕ್ಕೆ ನಡೆಯಲಿರುವ ಪಂದ್ಯದಲ್ಲಿ ಚೆನೈ ಸೂಪರ್‌ ಕಿಂಗ್ಸ್‌ ತಂಡವನ್ನು ಎದುರಿಸಲಿದೆ. ಈ ನಡುವೆ ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದ್ದು ಡೆಲ್ಲಿ ತಂಡದ ಭಾಗವಾಗಿರುವ ಆಟಗಾರನಿಗೆ ಕೊರೋನಾ ಪಾಸಿಟಿವ್‌ ದೃಢಪಟ್ಟಿದೆ. ಕೆಲದಿನಗಳ ಹಿಂದೆ ಡೆಲ್ಲಿ ಕೋಚ್‌ ರಿಕಿ ಪಾಂಟಿಂಗ್‌, ವಿದೇಶಿ ಆಟಗಾರರಾದ ಮಿಚೆಲ್‌ ಮಾರ್ಷ್‌, ಟೀಮ್‌ ಸೈಫರ್ಟ್‌, ಸಹಾಯಕ ಸಿಬ್ಬಂದಿ ಸೇರಿದಂತೆ ನಾಲ್ವರು ಕೊರೊನಾ ಸೋಂಕಿಗೆ ಒಳಗಾಗಿದ್ದರು.
ಇದೀಗ ಮತ್ತೆ ಡೆಲ್ಲಿ ಪಾಳೆಯದಲ್ಲಿ ಕೊರೋನಾ ಸ್ಪೋಟವಾಗಿದ್ದು, ತಂಡದ ನೆಟ್‌ ಬೌಲರ್‌ ಒಬ್ಬ ಸೋಂಕಿಗೆ ತುತ್ತಾಗಿದ್ದಾರೆ. ಆತನೊಂದಿಗೆ ರೂಂ ಹಂಚಿಕೊಂಡಿದ್ದ ಮತ್ತೊಬ್ಬ ಆಟಗಾರನನ್ನು ತಂಡದಿಂದ ಪ್ರತ್ಯೇಕವಾಗಿರಿಸಲಾಗಿದೆ.
ಐಪಿಎಲ್ ಪ್ರೋಟೋಕಾಲ್ ಪ್ರಕಾರ, ದೆಹಲಿ ಕ್ಯಾಪಿಟಲ್ಸ್ ಮತ್ತೊಂದು ಸುತ್ತಿನ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ ಮತ್ತು ಅಲ್ಲಿಯವರೆಗೆ ಎಲ್ಲಾ ಸದಸ್ಯರು ತಮ್ಮ ಕೊಠಡಿಗಳಲ್ಲಿ ಪ್ರತ್ಯೇಕವಾಗಿರಬೇಕಾಗುತ್ತದೆ. ಪಾಯಿಂಟ್ಸ್ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿರುವ ಡೆಲ್ಲಿ ಇಂದು ಮಹತ್ವದ ಪಂದ್ಯದಲ್ಲಿ ಚೆನೈ ತಂಡವನ್ನು ಎದುರಿಸಲಿದೆ. ಕೊರೋನಾ ಆತಂಕದ ನಡುವೆಯೂ ಇಂದಿನ ಪಂದ್ಯ ನಿಗದಿಯಂತೆಯೇ ನಡೆಯಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!