Thursday, August 11, 2022

Latest Posts

ನೀಟ್ ಪರೀಕ್ಷೆ ಭಯಕ್ಕೆ ಮತ್ತೊಂದು ಸಾವು: ವಿದ್ಯಾರ್ಥಿನಿ ಆತ್ಮಹತ್ಯೆ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸದಿಗಂತ ಆನ್‌ಲೈನ್ ಡೆಸ್ಕ್:

ನೀಟ್ ಪರೀಕ್ಷೆ ಭಯದಿಂದ ತಮಿಳುನಾಡಿನಲ್ಲಿ ಮತ್ತೊಂದು ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

19 ವರ್ಷದ ಅರಿಯಲುರ್ ಜಿಲ್ಲೆಯ ಸತಂಪಡಿ ಗ್ರಾಮದ ವಿದ್ಯಾರ್ಥಿನಿ ಕೆ. ಕನ್ನಿಮೋಳಿ ನೀಟ್ ಪರೀಕ್ಷೆಯಲ್ಲಿ ಫೇಲ್ ಆಗುವ ಭಯದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕೆಲವು ದಿನಗಳ ಹಿಂದಷ್ಟೆ ನಡೆದ ನೀಟ್ ಪ್ರವೇಶ ಪರೀಕ್ಷೆಯನ್ನು ಕನ್ನಿಮೋಳಿ ಬರೆದಿದ್ದಳು. ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಕಠಿಣವಾಗಿದ್ದು, ಫೇಲಾಗಬಹುದೆಂಬ ಭಯದಿಂದ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

“ಪರೀಕ್ಷೆ ಚೆನ್ನಾಗಾಗಿಲ್ಲವೆಂದು ಕನ್ನಿಮೋಳಿ ಬೇಸರವಾಗಿದ್ದಳು, ಮನೆಯಲ್ಲಿ ಪೋಷಕರು ಸಮಾಧಾನ ಮಾಡಿದ್ದರೂ ಆಕೆ ಬೇಸರದಲ್ಲಿಯೇ ಇದ್ದಳು. ಪೋಷಕರು ಮನೆಯಲ್ಲಿ ಇಲ್ಲದ ವೇಳೆ ಆಕೆ ಆತ್ಮಹತ್ಯೆಗೆ ಶರಣಾಗಿದ್ದಾಳೆ” ಎಂದು ತಿಳಿದು ಬಂದಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss