ಜೂ.11 ರಂದು ಶ್ರೀ ಬೊಮ್ಮಯ್ಯ ದೇವರ ಬಂಡಿಹಬ್ಬ

ಹೊಸ ದಿಗಂತ ವರದಿ , ಅಂಕೋಲಾ :

ಇಲ್ಲಿಯ ತೆಂಕಣಕೇರಿಯ ಗ್ರಾಮ ದೇವರಾದ ಶ್ರೀ ಬೊಮ್ಮಯ್ಯ ದೇವರ ಬಂಡಿಹಬ್ಬ ಜೂ.11 ರಂದು ಶನಿವಾರ ಮತ್ತು ಕಿರುಬಂಡಿಹಬ್ಬವು ಜೂ. 12 ರಂದು ಭಾನುವಾರ ಜರುಗಲಿದೆ.
ಶುಕ್ರವಾರ ಜರುಗಿದ ಶ್ರೀ ದೇವರ ಅವಲಬ್ಬದ ಸಂದರ್ಭದಲ್ಲಿ ದೇವರ ಅಪ್ಪಣೆಯಂತೆ ಆಡಳಿತ ಮಂಡಳಿ ಹಬ್ಬದ ದಿನಾಂಕ ನಿರ್ಧರಿಸಿದೆ.
ಜೂ. 5 ರಂದು ಭಾನುವಾರ ಆವಾರಿ ಜರುಗಲಿದ್ದು, ಜೂ. 7 ರಂದು ಶೇಷ ಹಾಕುವ ಕಾರ್ಯಕ್ರಮ ನಡೆಯಲಿದೆ. ಜೂ. 8 ರಂದು ಬುಧವಾರ ದೇವರ ಕರೆಯುವ ಕಾರ್ಯ ನಡೆಯಲಿದ್ದು, ಜೂ. 11 ರಂದು ಬಂಡಿಹಬ್ಬ, ಜೂ. 12 ರಂದು ಕಿರುಬಂಡಿಹಬ್ಬ ಜರುಗಲಿದೆ.
ಹಬ್ಬದ ಕಾರ್ಯಕ್ರಮದಲ್ಲಿ ಭಕ್ತರು ಸಕ್ರೀಯವಾಗಿ ಪಾಲ್ಗೊಂಡು ಸಹಕರಿಸುವಂತೆ ಆಡಳಿತ ಮಂಡಳಿ ತಿಳಿಸಿದೆ.
ನೂತನ ಆಡಳಿತ ಮಂಡಳಿ , ನೂತನ ಗುನಗರ ನೇಮಕದ ಹಿನ್ನೆಲೆಯಲ್ಲಿ ಬಂಡಿಹಬ್ಬ ನಿಂತಿತ್ತು. ಈಗ ಹೊಸ ಆಡಳಿತ ಮಂಡಳಿ ಬಂದಿದ್ದು ಗುನಗರ ನೇಮಕವೂ ಆಗಿದೆ. ಹೊಸ್ತು ಮತ್ತು ಅವಲಬ್ಬ ಸಾಂಗವಾಗಿ ಜರುಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!