ಪ್ರಧಾನಿ ಮೋದಿ ಸೂಚನೆ ಪಾಲಿಸಿದ ಜಿಲ್ಲಾಡಳಿತ: ಕೇದಾರನಾಥ ಸ್ವಚ್ಛ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಯಾತ್ರಾಸ್ಥಳಗಳಲ್ಲಿ ಸ್ವಚ್ಛತೆ ಕಾಪಾಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಜನತೆಯಲ್ಲಿ ಮನವಿ ಮಾಡಿದ ಬಳಿಕ ಯಾತ್ರಿಕರು, ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳು ಮಂಗಳವಾರ ಕೇದಾರನಾಥ ಧಾಮ್ ಬಳಿ ಸ್ವಚ್ಛತಾ ಅಭಿಯಾನವನ್ನು ಆಯೋಜಿಸಿದ್ದವು.
ತ್ಯಾಜ್ಯ ನಿರ್ವಹಣೆಯ ಬಗ್ಗೆ ಜಿಲ್ಲಾಡಳಿತ ನಿರಂತರವಾಗಿ ಮೇಲ್ವಿಚಾರಣೆ ಮಾಡುವುದಾಗಿ ರುದ್ರಪ್ರಯಾಗದ ಜಿಲ್ಲಾಧಿಕಾರಿ ಮಯೂರ್ ದೀಕ್ಷಿತ್ ಹೇಳಿದ್ದಾರೆ. ಇದರ ಪರಿಣಾಮವಾಗಿ ಕೇದಾರನಾಥ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಾಕಿದ್ದ ಕಸವನ್ನು ತೆರವುಗೊಳಿಸಲಾಗುತ್ತಿದೆ. ಮಂಗಳವಾರ ಬೆಳಗ್ಗೆ ಜಿಲ್ಲಾಡಳಿತ ಮತ್ತು ಪರಿಸರ ಸಂರಕ್ಷಣೆಗಾಗಿ ಶ್ರಮಿಸುತ್ತಿರುವ ಸುಲಭ್ ಇಂಟರ್‌ನ್ಯಾಶನಲ್‌ನ ಸಿಬ್ಬಂದಿ ಕೇದಾರನಾಥ ಪ್ರದೇಶದಲ್ಲಿ ಟನ್‌ಗಟ್ಟಲೆ ಕಸವನ್ನು ಸಂಗ್ರಹಿಸಿದರು.

ಗೌರಿಕುಂಡ್, ಸೋನಪ್ರಯಾಗ ಮತ್ತು ಕೇದಾರನಾಥ ಮಾರ್ಗದಲ್ಲಿ ಪ್ರವಾಸಿಗರು ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡರು. ಗೌರಿಕುಂಡ್, ಸೋನಪ್ರಯಾಗ ಮತ್ತು ಕೇದಾರನಾಥ ಪ್ರದೇಶಗಳಲ್ಲಿ ಹೆಚ್ಚಿನ ಪ್ರಮಾಣದ ತ್ಯಾಜ್ಯ ಸಂಗ್ರಹವಾಗಿರುವ ಪ್ರದೇಶಗಳಲ್ಲಿಯೂ ಸ್ವಚ್ಛತಾ ಅಭಿಯಾನವನ್ನು ನಡೆಸಲಾಗುತ್ತಿದೆ ಎಂದು ದೀಕ್ಷಿತ್ ತಿಳಿಸಿದರು. ಇನ್ನು ಮುಂದೆ ನಿತ್ಯವೂ ಯಾತ್ರಾ ಸ್ಥಳಗಳಲ್ಲಿ ಸ್ವಚ್ಛತಾ ಅಭಿಯಾನ ನಡೆಸುತ್ತೇವೆ. ‘ನಾವು ಎಲ್ಲೇ ಹೋದರೂ ಯಾತ್ರಾ ಸ್ಥಳಗಳ ಘನತೆಯನ್ನು ಕಾಪಾಡಿಕೊಳ್ಳೋಣ’ ಎಂದು ಪ್ರಧಾನಿ ಹೇಳಿದ ಮಾತನ್ನು ನಾವು ಪಾಲಿಸುತ್ತೇವೆ ಎಂದರು.

ನಾವು ಎಂದಿಗೂ ಶುದ್ಧತೆ, ಸ್ವಚ್ಛತೆ ಮತ್ತು ಪರಿಸರವನ್ನು ನಿರ್ಲಕ್ಷಿಸಬಾರದು. ಇವುಗಳಿಗಾಗಿ ನಾವು ಸ್ವಚ್ಛತೆಯ ನಿಯಮಗಳನ್ನು ಪಾಲಿಸುವುದು ಅತ್ಯಗತ್ಯವಾಗಿದೆ. ಜೂನ್ 5 ರಂದು ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತದೆ. ನಾವು ಸ್ವಚ್ಛ ಪರಿಸರ ಅಭಿಯಾನಗಳನ್ನು ನಡೆಸಬೇಕು ಅಭಿಯಾನಗಳು ಎಂದೆಂದಿಗೂ ಮುಗಿಯದ ಕಾರ್ಯ. ಈ ಸಮಯದಲ್ಲಿ ನಿಮ್ಮ ಜೊತೆಗೆ ಇತರರನ್ನು ಸೇರಿಸಿಕೊಂಡು ಸ್ವಚ್ಛತೆ ಮತ್ತು ಮರ ನೆಡುವಿಕೆ ಬಗ್ಗೆ ತಿಳಿ ಹೇಳಬೇಕು. ನೀವೇ ಒಂದು ಗಿಡ ನೆಟ್ಟು ಇತರರಿಗೂ ಸ್ಫೂರ್ತಿಯಾಗಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಸ್ವಚ್ಛತೆ ಬಗ್ಗೆ ಅರಿತಿರುವ ಪ್ರಧಾನಿ ನರೇಂದ್ರ ಮೋದಿ ಅವರು ಯಾತ್ರಾ ಸ್ಥಳಗಳ ಘನತೆ ಕಾಪಾಡುವಂತೆ ಜನರಿಗೆ ಭಾನುವಾರ ಮನವಿ ಮಾಡಿದರು. ಚಾರ್ ಧಾಮ್ ಯಾತ್ರೆಗೆ ರಾಜ್ಯಕ್ಕೆ ಆಗಮಿಸುವ ಸಾವಿರಾರು ಭಕ್ತರು ಆಗಮಿಸುತ್ತಾರೆ. ಕೇದಾರನಾಥದಲ್ಲಿ ಕೆಲವು ಯಾತ್ರಿಕರಿಂದ ಕಸದ ರಾಶಿ ನಿರ್ಮಾಣವಾಗಿರುವುದರ ಬಗ್ಗೆ ‘ಮನ್ ಕಿ ಬಾತ್’ ನಲ್ಲಿ ಪ್ರಧಾನಿ ಗಮನಸೆಳೆದಿದ್ದರು. ಪ್ರಧಾನಿ ಸೂಚನೆ ಬೆನ್ನಲ್ಲೇ ಜಿಲ್ಲಾಡಳಿತ ಸ್ವಚ್ಛತಾ ಕಾರ್ಯಕ್ಕೆ ಮುಂದಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!