Tuesday, August 16, 2022

Latest Posts

ಮಾ.21ರಂದು ಜಿಲ್ಲಾ ಕಸಾಪ ಕಟ್ಟಡ ಲೋಕಾರ್ಪಣೆ: ಸಿದ್ದಪ್ಪ ಹೊಟ್ಟಿ

ಹೊಸ ದಿಗಂತ ವರದಿ, ಯಾದಗಿರಿ:

ನಗರದಲ್ಲಿ ಊತನವಾಗಿ ನಿರ್ಮಿಸಲಾದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಕಟ್ಟಡವನ್ನು ರಾಜ್ಯ ಕಸಪ ಅಧ್ಯಕ್ಷ ಲೋಕಾರ್ಪಣೆ ಮಾಡಲಿದ್ದಾರೆ ಎಂದು ಪರಿಷತ್ತಿನ ಜಿಲ್ಲಾಧ್ಯಕ್ಷ ಸಿದ್ದಪ್ಪ ಹೊಟ್ಟಿ ಹೇಳಿದರು.
ಅವರು ಬುಧವಾರ  ವೀರಶೈವ ಕಲ್ಯಾಣ ಮಂಟಪದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 54 ಲಕ್ಷ ರೂಗಳ ವೆಚ್ಚದಲ್ಲಿ ಕಟ್ಟಡ ನಿರ್ಮಾಣವಾಗಿದ್ದು, ಅದಕ್ಕೆ ಕೇಂದ್ರ ಪರಿಷತ್ತು 15 ಲಕ್ಷ, ಕನ್ನಡ ಪ್ರಾಧಿಕಾರ 15 ಲಕ್ಷ, ಮಾಜಿ ಸಚಿವ ಡಾ. ಮಲಕರೆಡ್ಡಿ 10 ಲಕ್ಷ, ರಾಯಚೂರು ಲೋಕಸಭಾ ಮಾಜಿ ಸದಸ್ಯ ಬಿ.ವಿ.ನಾಯಕ 5 ಲಕ್ಷ ಹಾಗೂ ಶರಣಪ್ಪ ಮರ್ತೂರು 5 ಲಕ್ಷ ಸೇರಿ ಒಟ್ಟು 50 ಲಕ್ಷ ಅನುದಾನ ಬಂದಿದ್ದು, ಇನ್ನೂ 4 ಲಕ್ಷ ಬಾಕಿ ಇದೆ ಎಂದು ತಿಳಿಸಿದರು.
ಕಟ್ಟಡದಲ್ಲಿ ಮೂರು ವಾಣಿಜ್ಯ ಮಳಿಗೆಗಳು, ಇದ್ದು, ಸಭೆ ನಡೆಸಲು ಸಭಾಭವನ ಮತ್ತು ವಿಶ್ರಾಂತಿಗಾಗಿ ನಿವೇಶ ವ್ಯವಸ್ಥೆ ಇದೆ. ಈ ಕಟ್ಟಡದಿಂದ ಬರುವ ದಿನಗಳಲ್ಲಿ ಹೆಚ್ಚೆಚ್ಚು ಸಾಹಿತ್ಯಿಕ ಚಟುವಟಿಕೆ ನಡೆಸಲು ಅನಕೂಲವಾಗುತ್ತದೆ. ಈಗಾಗಲೇ ಶಹಪೂರ ತಾಲೂಕಿನಲ್ಲಿ ಪರಿಷತ್ತಿನ ಸ್ವಂತ ಕಟ್ಟಡ ಇದೆ. ಇತ್ತಿಚಿಗೆ ಹೊಸ ತಾಲೂಕು ಕೇಂದ್ರವಾದ ಹುಣಸಗಿಯಲ್ಲು ಕಟ್ಟಡದ ಶಂಕುಸ್ಥಾಪನೆಯನ್ನು ಶಾಸಕ ರಾಜುಗೌಡ ನೆರವೇರಿಸಿದ್ದು ಅನುದಾನ ಸಹ ಒದಗಿಸಿದ್ದಾರೆ. ಉಳಿದ ತಾಲೂಕುಗಳಲ್ಲಿ ಭವನ ನೀರ್ಮಿಸಲಾಗುವುದು ಎಂದು ಹೇಳಿದರು.
ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ, ಜಿಲ್ಲೆಯ ಶಾಸಕರು, ಜನಪ್ರತಿನಿಧಿಗಳು ಭಾಗವಹಿಸಲಿದ್ದು, ಸ್ಥಳೀಯ ಶಾಸಕ ವೆಂಕಟರೆಡ್ಡಿ ಮುದ್ನಾಳ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ತಿಳಿಸಿದರು.
ತಾವು ಎರಡು ಬಾರಿ ಅಧ್ಯಕ್ಷರಾಗಿ 4 ಬಾರಿ ಜಿಲ್ಲಾ ಸಮ್ಮೇಳಗಳನ್ನು ನಡೆಸಲಾಗಿದ್ದು 38 ಪುಸ್ತಕಗಳನ್ನು ಪ್ರಕಟಿಸಲಾಗಿದೆ. ಜಿಲ್ಲೆಯ ಅನೆಕ ಜನ ಸಾಧಕ ಮತ್ತು ಪ್ರಶಸ್ತಿ ಪುರಸ್ಕೃತರನ್ನು ಸತ್ಕರಿಸಿ ಗೌರವಿಸಲಾಗಿದೆ. ಶಿಕ್ಷಣ ಸಂಸ್ತೆಗಳಿಗೆ ಧನ ಸಹಾಯ, ಅನಾಥ ಮಕ್ಕಳ ಅಭ್ಯಾಸಕ್ಕಾಗಿ ಆರ್ಥಿಕ ನೆರವನ್ನು ಸಹ ನೀಡಲಾಗಿದೆ ಎಂದು ತಿಳಿಸಿದರು.

3ನೇ ಅವಧಿಗೆ ಸ್ಪರ್ಧೆ:
ಜಿಲ್ಲೆಯ ಎಲ್ಲಾ ಸಾಹಿತಿಗಳ ಮತ್ತು ಸದಸ್ಯರ ಒತ್ತಾಶೆಯಿಂದ ಮೂರನೆಯ ಅವಧಿಗಾಗಿ ಅಧ್ಯಕ್ಷ ಸ್ಥಾನಕ್ಕೆಕ ಸ್ಪರ್ಧಿಸುವುದಾಗಿ ಪ್ರಕಟಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಡಾ. ಸುಭಾಶ್ಚಂದ್ರ ಕೌಲಗಿ, ಕೋಢಾಧ್ಯಕ್ಷ ಡಾ. ಎಸ್.ಎಸ್ ನಾಯಕ, ಸದಸ್ಯರಾದ ಸಿ.ಎಂ ಪಟ್ಟೇದಾರ, ಅಯ್ಯಣ್ಣ ಹುಂಡೇಕಾರ, ಡಾ, ಘಾಳೆಪ್ಪ ಪೂಜಾರ, ಬಸವರಾಜ ಮೋಟ್ನಳ್ಳಿ ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss