ಹೊಸ ದಿಗಂತ ವರದಿ, ಹೊನ್ನಾವರ:
ತಾಲೂಕಿನ ಕಾಸರಕೋಡ ಟೊಂಕಾ ಕಡಲತೀರದಲ್ಲಿ ಕಡಲಾಮೆ ಮರಣ ಹೊಂದುತ್ತಿರುವುದು ಪತ್ತೆಯಾಗುತ್ತಿದೆ.
ಕಳೆದ 3ದಿನಗಳ ಹಿಂದೆ ಟೊಂಕಾ ಕಡಲ ತೀರದಲ್ಲಿ ಕಡಲಾಮೆಯ ಅಸ್ತಿ ಪಂಜರ ಪತ್ತೆಯಾಗಿತ್ತು.ಶುಕ್ರವಾರ ಸುಮಾರು 1ಕ್ವಿಂಟಾಲ ತೂಕದ ಕಡಲಾಮೆಯ ಮೃತ ದೇಹ ಪತ್ತೆಯಾಗಿದೆ.
ಸ್ಥಳಕ್ಕೆ ತಾಲೂಕಿನ ಅರಣ್ಯ ಇಲಾಖೆಯ ಅಧಿಕಾರಿಗಳು ಬೇಟ್ಟಿ ನೀಡಿ ಪರಿಶೀಲಿಸಿದ್ದಾರೆ. ಪಂಚನಾಮೆ ಮಾಡಿ ಕಡಲಾಮೆಯ ದೇಹವನ್ನು ಮರಣೋತ್ತರ ಪರೀಕ್ಷೆಗೆ ಸಾಗಿಸಿದ್ದಾರೆ.
ಓಲಿವ್ ರೆಡ್ಲಿ ಪ್ರಭೇದ ದ ಕಡಲಾಮೆ ಭಾರತದ ಎಲ್ಲಾ ಕಡಲ ಪ್ರದೇಶದಲ್ಲಿ ಕಂಡು ಬರುತ್ತದೆ. ಓಲವ ಹಣ್ಣಿನ ಬಣ್ಣದ ಮೇಲ್ಮಯ ಕವಚ ಹೊಂದಿರುತ್ತದೆ. ಸರಾಸರಿ ಅರ್ಧ ವೀಟರ್ ಉದ್ದ 50ಕೇಜಿ ಭಾರವಿರುತ್ತದೆ ಎಂದು ಕಡಲಾಮೆಯ ಮೃತದೇಹ ಪತ್ತೆಯಾದ ಸ್ಥಳದಲ್ಲಿ ಬೇಟಿಯಾದ ಕಡಲ ವಿಜ್ಞಾನಿ ಡಾ.ಪ್ರಕಾಶ ಮೇಸ್ತ ಮಾಹಿತಿ ನೀಡಿದರು