ಹುಣ್ಣಿಮೆ ದಿನ ಊರಿಗೆ ಊರೇ ಖಾಲಿ, ಅಪಶಕುನ ಆಗದಿದ್ರೆ ಸಾಕು ಅಂತಾರೆ ಗ್ರಾಮಸ್ಥರು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಾಘ ಮಾಸದ ಹುಣ್ಣಿಮೆಯನ್ನು ಶುಭ ಎಂದು ಪೂಜಿಸುವವರು ಇದ್ದಾರೆ. ಆದರೆ ಈ ಹಳ್ಳಿಯಲ್ಲಿ ಹುಣ್ಣಿಗೆ ಜನ ಭಯಬೀಳುತ್ತಾರೆ. ಸಾಕು ಪ್ರಾಣಿಗಳ ಜತೆ ಊರಿಗೇ ಊರನ್ನೇ ಖಾಲಿ ಮಾಡಿಕೊಂಡು ಹೋಗುತ್ತಾರೆ…

ಯಾವ ಊರಿದು? ಯಾಕೆ ಹೀಗೆ ಮಾಡ್ತಾರೆ ನೋಡಿ..
ಆಂಧ್ರಪ್ರದೇಶದ ಅಗ್ಗಿಪಡು ಗ್ರಾಮದಲ್ಲಿ ಈ ಹುಣ್ಣಿಮೆಯ ರಾತ್ರಿ ಊರಿನಲ್ಲಿ ಯಾರೇ ಇದ್ದರೂ ಅಪಶಕುನ ಎಂದು ಪರಿಗಣಿಸಲಾಗುತ್ತದೆ. ಹಿಂದಿನ ಕಾಲದಿಂದಲೂ ಈ ಆಚರಣೆ ಜಾರಿಯಲ್ಲಿದೆ.

ಹುಣ್ಣಿಮೆ ಹಿಂದಿನ ದಿನ ಊರು ಬಿಡಲಾಗುತ್ತದೆ. ಆ ಸಮಯದಲ್ಲಿ ಊರು ಕತ್ತಲಲ್ಲಿ ಮುಳುಗುತ್ತದೆ. ಯಾರ ಮನೆಯಲ್ಲಿಯೂ ದೀಪ ಇಲ್ಲ, ಬೀದಿ ದೀಪ ಇಲ್ಲ, ಒಲೆ ಹಚ್ಚೋದಿಲ್ಲ ಹೀಗೆ.. ಹತ್ತಿರದ ದರ್ಗಾಕ್ಕೆ ತೆರಳಿ ಅಲ್ಲಿಯೇ ಅಡುಗೆ ಮಾಡಿ ಊಟ ಮಾಡಿ ಮರುದಿನ ವಾಪಾಸಾಗುತ್ತಾರೆ.

ಈ ಹಿಂದೆ ಬ್ರಾಹ್ಮಣನೊಬ್ಬ ತಲರಿಚೆರುವು ಗ್ರಾಮವನ್ನು ದರೋಡೆ ಮಾಡಿದ್ದರಂತೆ, ಆಗ ಊರಿನವರು ಅವರನ್ನು ಹೊಡೆದು ಕೊಂದಿದ್ದರಂತೆ. ಇದಾದ ವರ್ಷಗಳ ನಂತರ ಊರಿನಲ್ಲಿ ಮಕ್ಕಳು ಏಕಾಏಕಿ ಮೃತಪಡುತ್ತಿದ್ದರು. ಆಗ ಜ್ಯೋತಿಷಿ ಇದಕ್ಕೆ ಬ್ರಾಹ್ಮಣನ ಸಾವು ಕಾರಣ, ಮಾಘಮಾಸದ ಹುಣ್ಣಿಮೆ ಯಾರೂ ಊರಿನಲ್ಲಿ ಇರಬೇಡಿ ಎಂದಿದ್ದರಂತೆ, ಅಂದಿನಿಂದ ಇಂದಿನವರೆಗೂ ಈ ಆಚರಣೆ ಜಾರಿಯಲ್ಲಿದೆ.

ಇಡೀ ಊರಿನವರು ದರ್ಗಾ ಬಳಿ ಸೇರಿ, ಅಡುಗೆ ಮಾಡಿ, ಊಟ ಮಾಡಿ ಅಲ್ಲಿಯೇ ಮಲಗಿ ಬೆಳಗ್ಗೆ ಎದ್ದು ಹೋಗಿ, ಮನೆಯೆಲ್ಲಾ ಶುಚಿಗೊಳಿಸಿ ಪೂಜೆ ಮಾಡುತ್ತಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!