ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Tuesday, May 18, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಯೋಧರ ಮೇಲೆ ದಾಳಿ ನಡೆಸಿ ಹತ್ಯೆ ಮಾಡಿರುವ ನಕ್ಸಲರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಎಬಿವಿಪಿ ಪ್ರತಿಭಟನೆ

ಹೊಸ ದಿಗಂತ ವರದಿ, ಶಿವಮೊಗ್ಗ:

ಛತ್ತೀಸ್‌ಘಡದ ಅರಣ್ಯ ಪ್ರದೇಶದಲ್ಲಿ ಯೋಧರ ಮೇಲೆ ದಾಳಿ ನಡೆಸಿ ಹತ್ಯೆ ಮಾಡಿರುವ ನಕ್ಸಲರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಬುಧವಾರ ಮಹಾವೀರ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.
ಭದ್ರತಾ ಪಡೆಗಳ ಮೇಲೆ ನಕ್ಸಲರು ನಡೆಸಿರುವ ಕೃತ್ಯ ಖಂಡನೀಯವಾದುದು. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಯೋಧರ ಮೇಲೆ ದಾಳಿ ನಡೆಸಿರುವ ನಕ್ಸಲರ ವಿರುದ್ಧ ಕಠಿಣ ಕೈಗೊಳ್ಳಬೇಕು. ನಕ್ಸಲರ ಚಟುವಟಿಕೆಗಳಿಗೆ ದೇಶದಲ್ಲಿ ಪೂರ್ಣ ಪ್ರಮಾಣದಲ್ಲಿ ಮಟ್ಟ ಹಾಕಬೇಕು ಎಂದು ಆಗ್ರಹಿಸಿದರು.
ಛತ್ತೀಸ್‌ಘಡದಲ್ಲಿ ಇಷ್ಟೆಲ್ಲಾ ದುಷ್ಕೃತ್ಯ ನಕ್ಸಲರ ಕಡೆಯಿಂದ ನಡೆದಿದ್ದರೂ ನಮ್ಮ ದೇಶದ ಸ್ವಘೋಷಿತ ಬುದ್ಧಿ ಜೀವಿಗಳು, ಸ್ವಘೋಷಿತ ಮಾನವಹಕ್ಕು ಹೋರಾಟಗಾರರು ಸೈನಿಕರ ಸಾವಿನ ಬಗ್ಗೆ ಎಲ್ಲಿಯೂ ಧ್ವನಿ ಎತ್ತದೇ ಇರುವುದು ಖಂಡನೀಯ ಎಂದು ತಿಳಿಸಿದರು.
ಎಬಿವಿಪಿ ಮಹಾನಗರ ಸಹ ಕಾರ್ಯದರ್ಶಿ ದರ್ಶನ್, ಕುಮಾರಸ್ವಾಮಿ, ಅರವಿಂದ್, ಸ್ವಾತಿ, ಮನೋಹರ್, ಪ್ರಜ್ವಲ್, ಸುಪ್ರೀತಾ, ಆದಿತ್ಯ ಇನ್ನಿತರರು ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss