ವೀರ ಸಾವರ್ಕರ್‌ ಜನ್ಮದಿನ: ಚಿತ್ರತಂಡದಿಂದ ಸಾವರ್ಕರ್ ಜೀವನ ಚರಿತ್ರೆಯ ಫಸ್ಟ್‌ ಲುಕ್‌ ಬಿಡುಗಡೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಭಾರತೀಯ ಸಿನಿ ರಂಗದಲ್ಲಿ ದೇಶ ಪ್ರೇಮಿಗಳ ಬಯೋಪಿಕ್‌ ತೆಗೆಯುವುದು ಹೊಸದೇನಲ್ಲ. ಈ ನಿಟ್ಟಿನಲ್ಲಿ ಈಗಾಗಲೇ ಹಲವು ಚಿತ್ರಗಳು ಕೂಡ ತೆರೆಕಂಡಿವೆ. ಇದೀಗ ಆ ಸಾಲಿನಲ್ಲಿ ʻವೀರ ಸಾವರ್ಕರ್ʼ ಕೂಡ ಸೇರಿದ್ದಾರೆ. ಇಂದು ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಅವರ ಜನ್ಮದಿನ. ಅವರ ಜನ್ಮದಿನದಂದು ನಟ ರಣದೀಪ್ ಹೂಡಾ ತಮ್ಮ ಮುಂಬರುವ ಚಿತ್ರ ‘ಸ್ವತಂತ್ರ ವೀರ್ ಸಾವರ್ಕರ್’ ನ ಕಿರು ವೀಡಿಯೊದೊಂದಿಗೆ ಫಸ್ಟ್ ಲುಕ್ ಹಂಚಿಕೊಂಡಿದ್ದಾರೆ. ಈ ಚಿತ್ರ ವೀರ ಸಾವರ್ಕರ್ ಎಂದೇ ಜನಪ್ರಿಯರಾಗಿರುವ ಸ್ವಾತಂತ್ರ್ಯ ಹೋರಾಟಗಾರ ʻವಿನಾಯಕ ದಾಮೋದರ್ ಸಾವರ್ಕರ್ʼ ಅವರ ಜೀವನಚರಿತ್ರೆಯಾಗಿದೆ.

‘ಸರ್ಬ್‌ಜಿತ್‌’ ಚಿತ್ರದಲ್ಲಿ ನಟಿಸಿರುವ ನಟ ರಣದೀಪ್‌ ಹೂಡ ತನ್ನ Instagram ಖಾತೆಯಲ್ಲಿ ಚಿತ್ರದ ಮೊದಲ ಪೋಸ್ಟರ್ ಹಂಚಿಕೊಂಡಿದ್ದಾರೆ. ಸಿನಿಮಾ ಫಸ್ಟ್‌ಲುಕ್‌ ಹಂಚಿಕೊಂಡ ರಂದೀಪ್ ಸಿನಿಮಾ ಬಗ್ಗೆ ಬರೆದುಕೊಂಡಿದ್ದಾರೆ. “ಭಾರತದ ಸ್ವಾತಂತ್ರ್ಯ ಮತ್ತು ಸ್ವಯಂ ಸಾಕ್ಷಾತ್ಕಾರ ಹೋರಾಟದಲ್ಲಿ ಮಹಾನ್‌ ವೀರರಿಗೆ ಸಲ್ಲಿಸುವ ಗೌರವ. ಇತಿಹಾಸದ ಪುಟಗಳಲ್ಲಿ ಮರೆಯಾಗಿದ್ದ ಅವರ ನೈಜ ಕಥೆಯನ್ನು ಜನರೆದುರು ಬಿಚ್ಚಿಡಲು ನನಗೆ ಹೆಮ್ಮೆಯಾಗುತ್ತಿದೆ ಎಂದು ತಿಳಿಸಿ ಎಲ್ಲರಿಗೂ #ವೀರಸಾವರ್ಕರ್ ಜಯಂತಿಯ ಶುಭಾಶಯಗಳನ್ನು ಕೋರಿದ್ದಾರೆ. ಅತೀ ಶೀಘ್ರದಲ್ಲೇ ಚಿತ್ರ ನಿರ್ಮಾಣವಾಗಲಿದ್ದು, ಮಹೇಶ್ ಮಾಂಜ್ರೇಕರ್ ಚಿತ್ರವನ್ನು ನಿರ್ದೇಶಿಸಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!