Thursday, August 11, 2022

Latest Posts

ಬಿಜೆಪಿ ಅಭ್ಯರ್ಥಿಗಳ ಗೆಲ್ಲಿಸುವ ಮೂಲಕ ಮತ್ತೊಮ್ಮೆ ಕಲಬುರಗಿ ಕಾಂಗ್ರೆಸ್ ಮುಕ್ತ: ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸದಿಗಂತ ವರದಿ, ಕಲಬುರಗಿ:

ಹಿಂದೆಂದಿಗಿಂತಲೂ ಅಧಿಕವಾಗಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಮತದಾರರು ಮತ್ತೊಮ್ಮೆ ಕಲಬುರಗಿಯನ್ನು ಕಾಂಗ್ರೆಸ್ ಮುಕ್ತವಾದ ಜಿಲ್ಲೆಯನ್ನಾಗಿ ಮಾಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಅವರು ನಗರದ ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಆಯೋಜಿಸಲಾಗಿದ್ದ ನೂತನ ಪಾಲಿಕೆ ಸದಸ್ಯರ ಅಭಿನಂಧನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿ, ಹತ್ತಾರೂ ವರ್ಷಗಳಿಂದ ಕಾಂಗ್ರೆಸ್ ಪಕ್ಷವು ಪಾಲಿಕೆಯಲ್ಲಿ ತನ್ನ ದುರಾಡಳಿತವನ್ನು ಮುನ್ನೆಡಸಿಕೊಂಡು ಬರುತ್ತಿತ್ತು, ಆದರೆ ಇಂದು ಬಿಜೆಪಿ ಪಕ್ಷಕ್ಕೆ ಐತಿಹಾಸಿಕ ಗೆಲುವು ಕೊಡುವ ಮೂಲಕ ಮತದಾರರು ಹಾಗೂ ನಮ್ಮ ಕಾರ್ಯಕರ್ತರು ಕಾಂಗ್ರೆಸ್ ಕೋಟೆಯನ್ನು ಛಿದ್ರ ಮಾಡಿದ್ದಾರೆ ಎಂದರು. ಈ ಮೂಲಕ ನಗರ ಪಾಲಿಕೆ ಚುನಾವಣೆಯಲ್ಲಿ ಐತಿಹಾಸಿಕ ಗೆಲುವು ನಮ್ಮದಾಗಿದೆ ಎಂದರು.
ಕಾಂಗ್ರೆಸ್ ಪಕ್ಷ ಚುನಾವಣೆ ಮುನ್ನ ಸಂಗೀತ ಕಾರ್ಯಕ್ರಮವನ್ನು ಆಡುತ್ತಿದ್ದರು, ನಾನೇ ಮುಖ್ಯಮಂತ್ರಿ, ನಾನೇ ಮುಖ್ಯಮಂತ್ರಿ ಎಂದು. ಆದರೆ ಯಾರು ಸಂಗೀತ ಕಾರ್ಯಕ್ರಮ ನಡೆಸುತ್ತಿದ್ದರೋ, ಅವರ ಸ್ಥಿತಿ ರಾಜ್ಯದ ಮೂರು ಮಹಾ ನಗರ ಪಾಲಿಕೆ ಚುನಾವಣೆಯ ಫಲಿತಾಂಶದಲ್ಲಿ ಸೋತು ಹೋಗಿದೆ ಎಂದರು. ಇತಿಹಾಸದಲ್ಲಿ ಮೊದಲ ಬಾರಿಗೆ ಕಲಬುರಗಿ ಮಹಾ ನಗರ ಪಾಲಿಕೆಯಲ್ಲಿ ಐತಿಹಾಸಿಕ ವಿಜಯವನ್ನು ಸಾಧಿಸಿದೆ. ಇದಕ್ಕೆ ಪೂರಕವಾಗಿ ನಾನು ಕಲಬುರಗಿ ಜನತೆಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಕಾಂಗ್ರೆಸ್ ನಿಂದ ಅಭಿವೃದ್ಧಿ ಕುಂಟಿತ
ಹಲವಾರು ವರ್ಷಗಳಿಂದ ಪಾಲಿಕೆ ಚುನಾವಣೆಯಲ್ಲಿ ಅಧಿಕಾರವನ್ನು ನಡೆಸಿ, ಕಿಂಚಿತ್ತೂ ನಗರವನ್ನು ಅಭಿವೃದ್ಧಿ ಮಾಡದೇ, ತಮ್ಮದೇ ಅಭಿವೃದ್ಧಿಯನ್ನು ಮಾಡಿಕೊಂಡಿದ್ದಾರೆ. ಹೀಗಾಗಿ ನಗರದ ಅಭಿವೃದ್ದಿಯಾಗಿಲ್ಲ. ಕಳೆದ ಲೋಕಸಭೆ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸಿ ಮನೆಗೆ ಕಳುಹಿಸಿದರು. ಈ ಬಾರಿ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ತಕ್ಕ ಪಾಠ ಕಲಿಸಿ, ಮಲ್ಲಿಕಾರ್ಜುನ ಖರ್ಗೆ ಅವರನ್ನು ಬೆಂಗಳೂರಿನಲ್ಲೆ ಇರಲು ಮತದಾರರು ಸಂದೇಶವನ್ನು ರವಾನೆ ಮಾಡಿದ್ದಾರೆ ಎಂದರು.
ಭ್ರಷ್ಟಾಚಾರ ರಹಿತ ಆಡಳಿತವನ್ನು ಬಿಜೆಪಿ ಪಕ್ಷದ ಎಲ್ಲ ನೂತನ ಸದಸ್ಯರು ಮಾಡಿ, ಜನರಿಗೆ ಕೊಟ್ಟಂತಹ ಭರವಸೆಯನ್ನು ಇಡೇರಿಸಬೇಕೆಂದು ನೂತನ ಪಾಲಿಕೆ ಸದಸ್ಯರಿಗೆ ಕಿವಿ ಮಾತು ಹೇಳಿದರು.ಬೆಳಗಾವಿ,ಕಲಬುರಗಿ,ಹುಬ್ಬಳ್ಳಿ-ಧಾರವಾಡ, ದೊಡ್ಡ ಬಳ್ಳಾಪುರ ಸೇರಿದಂತೆ ನಡೆದ ಎಲ್ಲ ಚುನಾವಣೆಗಳಲ್ಲಿ ಮತದಾರರು ನಮ್ಮ ಪಕ್ಷಕ್ಕೆ ಅಭೂತಪೂರ್ವ ಜಯವನ್ನು ನೀಡಿದ್ದು, ಮತದಾರ ಪ್ರಭುವಿಗೆ ನಾನು ಆಭಾರಿಯಾಗಿದ್ದೇನೆ ಎಂದು ನುಡಿದರು. ಕೇಂದ್ರದಲ್ಲಿ ನರೇಂದ್ರ ಮೋದಿ ಆಡಳಿತ, ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪನವರ ಮಾರ್ಗಧರ್ಶನದ ಬೊಮ್ಮಾಯಿ ಆಡಳಿತ ಜನರ ಪರವಾಗಿ ಇರಲಿದೆ ಎಂದು ಹೇಳಿದರು.
ನಗರದ ಬಿಜೆಪಿ ಅಧ್ಯಕ್ಷ ಸಿದ್ದಾಜೀ ಪಾಟೀಲ ಸ್ವಾಗತವನ್ನು ಕೋರಿದರು. ಸಮಾರಂಭದಲ್ಲಿ ಸಚಿವ ಮುರುಗೇಶ ನಿರಾಣಿ, ಬಿಜೆಪಿ ರಾಜ್ಯ ಸಂಘಟನಾ ಕಾರ್ಯದರ್ಶಿ ಅರುಣಕುಮಾರ, ರಾಜ್ಯ ಉಪಾಧ್ಯಕ್ಷ ನಿರ್ಮಲ್ ಕುಮಾರ ಸುರಾಣಾ, ಮಾಲೀಕಯ್ಯಾ ಗುತ್ತೇದಾರ, ಸಂಸದ ಉಮೇಶ ಜಾಧವ, ಶಾಸಕರಾದ ಬಿ.ಜಿ.ಪಾಟೀಲ, ರಾಜಕುಮಾರ ಪಾಟೀಲ,ದತ್ತಾತ್ರೇಯ ಪಾಟೀಲ, ಶಶೀಲ ನಮೋಶಿ, ಬಸವರಾಜ ಮತ್ತಿಮಡು, ಸುಭಾಷ ಗುತ್ತೇದಾರ, ಅವಿನಾಶ ಜಾಧವ, ಈಶ್ವರ ಸಿಂಗ್ ಠಾಕೂರ, ಕ್ರೆಡೆಲ್ ಅದ್ಯಕ್ಷ ಚಂದು ಪಾಟೀಲ, ಶಿವರಾಜ ಪಾಟೀಲ ರದ್ದೆವಾಡಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss