ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ಕಾಡಾನೆ ದಾಳಿ: ಓರ್ವ ಸಾ*ವು

ಹೊಸದಿಗಂತ ವರದಿ ​ಸಿದ್ದಾಪುರ: ಹಾಡಹಗಲೇ ನಡೆದ ಕಾಡಾನೆ ದಾಳಿಗೆ ಕಾಫಿ ಬೆಳೆಗಾರರೊಬ್ಬರು ಬಲಿಯಾಗಿರುವ ಘಟನೆ ಗುರುವಾರ ಇಲ್ಲಿನ ಹೈಸ್ಕೂಲ್ ಪೈಸಾರಿಯಲ್ಲಿ ನಡೆದಿದೆ. ಸಿದ್ದಾಪುರ ನಿವಾಸಿ ಚೌರಿರ ಗಣಪತಿ (ಗಪ್ಪು-49) ಕಾಡಾನೆಗೆ ಬಲಿಯಾದವರು. ಗುರುವಾರ ಪೂರ್ವಾಹ್ನ ಸಿದ್ದಾಪುರದ ಹೈಸ್ಕೂಲ್ ಪೈಸಾರಿಯಲ್ಲಿರುವ ತಮ್ಮ ಕಾಫಿ ತೋಟದಲ್ಲಿ ಕಾರ್ಮಿಕರೊಂದಿಗೆ ಇದ್ದ ಸಂದರ್ಭ ಏಕಾಏಕಿ ದಾಳಿ ನಡೆಸಿದ ಕಾಡಾನೆ ಅವರನ್ನು ಸ್ಥಳದಲ್ಲೇ ಸಾಯಿಸಿರುವುದಾಗಿ ಹೇಳಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಹಾಗೂ ಅರಣ್ಯ ಅಧಿಕಾರಿಗಳು ಭೇಟಿ ನೀಡಿದ್ದು, ಕಾಡಾನೆ ಹಾವಳಿಯನ್ನು ತಡೆಗಟ್ಟುವಲ್ಲಿ ಅರಣ್ಯ ಇಲಾಖೆ … Continue reading ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ಕಾಡಾನೆ ದಾಳಿ: ಓರ್ವ ಸಾ*ವು