ಚೀನಾದಲ್ಲಿ ಮತ್ತೊಂದು ವಿಮಾನ ದುರಂತ: ಜನವಸತಿ ಪ್ರದೇಶಕ್ಕೆ ಅಪ್ಪಳಿಸಿದ ಫೈಟರ್ ಜೆಟ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಚೀನಾದ ಫೈಟರ್ ಜೆಟ್ ವಿಮಾನವೊಂದು ಮಧ್ಯ ಚೀನಾದ ಹುಬೈ ಪ್ರಾಂತ್ಯದಲ್ಲಿ ಜನವಸತಿ ಕಟ್ಟಡಕ್ಕೆ ಅಪ್ಪಳಿಸಿದ್ದು, ಅವಘಡದಲ್ಲಿ ಓರ್ವ ನಾಗರಿಕ ಸಾವನ್ನಪ್ಪಿ ಇಬ್ಬರು ವ್ಯಕ್ತಿಗಳು ಗಾಯಗೊಂಡಿದ್ದಾರೆ.
ಈ ಅಪಘಾತದಿಂದ ಅಕ್ಕಪಕ್ಕದ ಮನೆಗಳಿಗೆ ಬೆಂಕಿ ಹೊತ್ತಿಕೊಂಡಿದ್ದು, ಪ್ರದೇಶದಲ್ಲಿ ಭಯ ಮತ್ತು ಭೀತಿಯನ್ನು ಹುಟ್ಟುಹಾಕಿದೆ. ಕ್ಸಿಯಾಂಗ್‌ಯಾಂಗ್‌ನ ಲಾಹೆಕೌ ವಿಮಾನ ನಿಲ್ದಾಣದ ಬಳಿ ಅಪಘಾತ ಸಂಭವಿಸಿದೆ, ಈ ನಿಲ್ದಾಣವನ್ನು  ಚೀನಾದ ವಾಯುಪಡೆ ಸೇರ್ಪಡೆಯಾಗುವ ಹೊಸ ಫೈಟರ್ ಪೈಲಟ್‌ಗಳಿಗೆ ತರಬೇತಿ ನೀಡಲು ಬಳಸಲಾಗುತ್ತದೆ.
ನಿಯಂತ್ರಣ ತಪ್ಪಿದ ಜೆ-7 ಫೈಟರ್ ಜೆಟ್‌ ವಿಮಾನದಿಂದ ಪೈಲಟ್ ಸುರಕ್ಷಿತವಾಗಿ ಹೊರಹಾರಿದ. ಬಳಿಕ ವಿಮಾನವು ಹುಬೈಯ ಕ್ಸಿಯಾಂಗ್‌ಯಾಂಗ್ ಪ್ರದೇಶದ ಕಟ್ಟಡವೊಂದಕ್ಕೆ ಅಪ್ಪಳಿಸಿತು, ಈ ವೇಳೆ ಅಕ್ಕಪಕ್ಕದ ಮನೆಗಳಿಗೆ ಬೆಂಕಿ ಹತ್ತಿಕೊಂಡಿತು ಎಂದು ಮಾಧ್ಯಮ ವರದಿಗಳು ತಿಳಿಸಿವೆ.
ತಕ್ಷಣವೇ ಪೈಲೆಟ್ ಮತ್ತು ಇಬ್ಬರು ಗಾಯಾಳು ವ್ಯಕ್ತಿಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಯಿತು.
“ಅಧಿಕೃತ ಸುದ್ದಿ ಸಂಸ್ಥೆ, ಕ್ಸಿನ್ಹುವಾ ಘಟನೆ ಬಗ್ಗೆ ಪೋಸ್ಟ್ ಮಾಡಿದ ವೀಡಿಯೊ ಘಟನಾ ಸ್ಥಳದಲ್ಲಿ ಹಲವಾರು ಮನೆಗಳು ಬೆಂಕಿಯಿಂದ ಉರಿಯುತ್ತಿರುವುದನ್ನು ತೋರಿಸಿದೆ.
ಅಪಘಾತದ ಕಾರಣ ಮತ್ತು ಹೆಚ್ಚಿನ ಸಾವುನೋವುಗಳು ಸಂಭವಿಸಿವೆಯೇ ಎಂದು ತನಿಖೆ ನಡೆಸಲಾಗುತ್ತಿದೆ ಎಂದು ಸಿಸಿಟಿವಿ ಮಿಲಿಟರಿ ವರದಿ ಮಾಡಿದೆ. ಚೀನಾದಲ್ಲಿ ತರಬೇತಿ ಹಾರಾಟದ ಸಮಯದಲ್ಲಿ ಫೈಟರ್ ಜೆಟ್‌ಗಳು ಅಪಘಾತಕ್ಕೀಡಾದ ಹಲವಾರು ಪ್ರಕರಣಗಳು ಇತ್ತಿಚೆಗೆ ವರದಿಯಾಗುತ್ತಿದೆ ಎಂದು ಎಸ್‌ಸಿಎಂಪಿ ವರದಿ ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!