ಹೊಸದಿಗಂತ ವರದಿ ಬಾಗಲಕೋಟೆ :
ನಗರದ ವಿಶಾಲ ಅಲ್ಲಯ್ಯ ಸರಗಣಾಚಾರಿ ಎಂಬವರು ಕಾರು ಪಲ್ಟಿಯಾಗಿ ಸಾವನ್ನಪ್ಪಿದ್ದಾರೆ.
ನಸುಕಿನ ಜಾವ ಗೆಳೆಯರೊಂದಿಗೆ ಹೋಗುವಾಗ ಕಾರು ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ತಲೆಗೆ ಗಂಭಿರವಾದ ಗಾಯವಾಗಿದ್ದರಿಂದ ವಿಶಾಲ ಸರಗಣಾಚಾರಿ ಸ್ಥಳದಲ್ಲೇ ಮೃತಪಟ್ಟರೆ ಕಾರಿನಲ್ಲಿದ್ದ ಇಬ್ಬರು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಾಗಲಕೋಟೆಯಿಂದ ಕಲಾದಗಿ ರಸ್ತೆಯ ಮಾರ್ಗದಲ್ಲಿ ಇರುವ ಹವೇಲಿ ಕ್ರಾಸ್ ಬಳಿ ಈ ದುರ್ಘಟನೆಯಾಗಿದೆ