Friday, July 1, 2022

Latest Posts

ತುಂಗಭದ್ರ ನದಿಗೆ ಲಕ್ಷ ಕ್ಯೂಸೆಕ್ಸ್ ನೀರು ಬಿಡುಗಡೆ: ಕಂಪ್ಲಿ ಸೇತುವೆ ಮುಳುಗಡೆ

ಹೊಸದಿಗಂತ ವರದಿ,ಬಳ್ಳಾರಿ:

ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಅಕಾಲಿಕ ಮಳೆ ಹಿನ್ನೆಲೆ ತುಂಗಭದ್ರಾ ಜಲಾಶಯದ ಒಳ ಹರಿವು ಹೆಚ್ಚಿದ್ದು, ಭಾನುವಾರ ಜಲಾಶಯದಿಂದ 1ಲಕ್ಷ ಕ್ಯೂಸೆಕ್ಸ್ ‌ನೀರನ್ನು ನದಿಗೆ ಹರಿ ಬಿಡಲಾಗಿದೆ. ವಿಶ್ವ ಪ್ರಸಿದ್ಧ ಹಂಪಿಯ ನಾನಾ ಸ್ಮಾರಕಗಳು, ಗಂಗಾವತಿ- ಕಂಪ್ಲಿ ಸಂಪರ್ಕ ಕಲ್ಪಿಸುವ ಸೇತುವೆ ಸಂಪೂರ್ಣ ‌ಮುಳುಗಡೆಯಾಗಿದೆ. ಕಳೆದ ಮೂರು ದಿನಗಳಿಂದ ಸುರಿದ ಮಳೆಗೆ ಜನಜೀವನ ಅಸ್ತವ್ಯಸ್ತ ಗೊಂಡಿದ್ದು, ಅದರಲ್ಲೂ ನದಿ ಪಾತ್ರದ ಜನರ ಸಂಕಷ್ಟ ಹೇಳತೀರದಾಗಿದೆ. ಜಿಲ್ಲೆಯ ಸಿರುಗುಪ್ಪ ತಾಲೂಕಿನ ಬಾಗೇವಡಿ, ಸೇರಿದಂತೆ ನಾನಾ ಕಡೆ ಪ್ರವಾಹ ಬೀತಿ ಎದುರಾಗಿದೆ. ಬಾಗೆವಡಿ ಗ್ರಾಮದ ನದಿಪಾತ್ರದಲ್ಲಿ ಸುಮಾರು 265 ಕುರಿಗಳು ನೀರು ಪಾಲಾಗಿದ್ದು, ಬಳ್ಳಾರಿಯ ಅಗ್ನಿಶಾಮಕ ದಳದ ನೇತೃತ್ವದ ತಂಡ ಎರಡು ಬೋಟ್ ಹಾಗೂ ಒಬಿಎಂ ಮಶಿನ್ ಗಳ ಮೂಲಕ ರಕ್ಷಿಸುವಲ್ಲಿ ಯಶಸ್ವಿಯಾಗಿದೆ. ಇದರ ಜೊತೆಗೆ ಗ್ರಾಮದ 3 ಜನ ಕುರಿಗಾಹಿಗಳು ನೀರಲ್ಲಿ ಸಿಲುಕಿಕೊಂಡಿದ್ದು, ನಂತರ ಅವರನ್ನೂ ರಕ್ಷಿಸಲಾಗಿದೆ. ಸದ್ಯ ಒಂದು ಲಕ್ಷ ಕ್ಯೂಸೆಕ್ಸ್ ನೀರನ್ನು‌ ನದಿಗೆ ಹರಿಬಿಡಲಾಗಿದ್ದು, ಜಲಾಶಯದ ಒಳ ಹರಿವು ಹೆಚ್ಚಾದರೇ ನದಿಗೆ ಹರಿ‌ಬಿಡುವ ಪ್ರಮಾಣ ಹೆಚ್ಚಾಗಲಿದ್ದು, ನದಿ ಪಾತ್ರದ ಜನರು ಸುರಕ್ಷಿತ ಸ್ಥಳಕ್ಕೆ ತೆರಳಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss