‘ತುಪ್ಪ ಸೇವಿಸಿದರೆ ದೇಹದಲ್ಲಿ ಕೊಬ್ಬು ಹೆಚ್ಚುತ್ತದೆ, ದಪ್ಪ ಆಗುತ್ತೇವೆಂಬ’ ಕಾರಣಕ್ಕೆ ತುಂಬಾ ಜನ ತುಪ್ಪದ ಹತ್ತಿರಕ್ಕೂ ಸುಳಿಯುವುದಿಲ್ಲ. ಆದರೆ ಇದು ತಪ್ಪು ತಿಳುವಳಿಕೆ. ತುಪ್ಪದಲ್ಲಿ ಸಾಕಷ್ಟು ಆರೋಗ್ಯಕರ ಲಾಭವಿದೆ. ನ ನಿತ್ಯ ಒಂದು ಚಮಚ ತುಪ್ಪ ಸೇವಿಸುವುದರಿಂದ ಕೊಬ್ಬು ಹೆಚ್ಚುವುದಿಲ್ಲ. ಬದಲಾಗಿ ಆರೋಗ್ಯಕರವಾಗಿ ಸುಧಾರಿಸುತ್ತದೆ. ತುಪ್ಪದಲ್ಲಿ ವಿಟಮಿನ್ ಎ, ಡಿ, ಕ್ಯಾಲ್ಸಿಯಂ, ಫಾಸ್ಫರಸ್, ಖನಿಜಗಳು ಮತ್ತು ಪೊಟ್ಯಾಸಿಯಮ್ ಮುಂತಾದ ಪೋಷಕಾಂಶಗಳಿವೆ.
- ವಿಟಮಿನ್:
ತುಪ್ಪದಲ್ಲಿ ಎ,ಇ,ಡಿ,ಕೆ ಯಂತಹ ವಿಟಮಿನ್ ಅಂಶಗಳು ಹೆಚ್ಚಿದ್ದು, ಇವು ಶರೀರಕ್ಕೆ ಅಗತ್ಯವಿರುವ ಪೋಷಕಾಂಶಗಳನ್ನು ಕೊಡುತ್ತವೆ.ಆರೋಗ್ಯ ವೃದ್ಧಿಗೆ ಬಹಳ ಸಹಾಯವಾಗುತ್ತದೆ. - ರೋಗ ನಿರೋಧಕ:
ತುಪ್ಪದಲ್ಲಿ ಇರುವ ವಿಟಮಿನ್ಗಳಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ತುಪ್ಪವನ್ನು ನೇರವಾಗಿ ತಿನ್ನುವುದು ಕಷ್ಟವಾದರೆ, ಆಹಾರ ಪದಾರ್ಥದೊಂದಿಗೆ ಸೇರಿಸಿಕೊಂಡು ಸೇವಿಸಿ. ಈ ಕೋವಿಡ್ ಸಮಯದಲ್ಲಿ ತುಪ್ಪ ಸೇವಿಸುವುದು ಅಗತ್ಯ. - ಸ್ನಾಯು ಆರೋಗ್ಯ:
ಸ್ನಾಯುಗಳಿಗೆ, ಕೀಲುಗಳಿಗೆ, ಬೇಕಾದ ಪೋಷಕಾಂಶಗಳು ತುಪ್ಪದಿಂದ ಸಿಗುತ್ತದೆ. ಗಟ್ಟಿ ಮುಟ್ಟಾಗಿ ದೇಹ ಇರಬೇಕೆಂದರೆ ತುಪ್ಪ ಅಗತ್ಯ. ಹಿಂದಿನ ಕಾಲದವರು ಹೆಚ್ಚಾಗಿ ತುಪ್ಪವನ್ನು ಬಳಸುತ್ತಿದ್ದರು. ಹಾಗಾಗಿಯೇ ಅವರು ನಮಗಿಂತ ಗಟ್ಟಿ ಮುಟ್ಟಾಗಿ ಇದ್ದಾರೆ - ಎದೆ ಉರಿ:
ಎದೆ ಉರಿ, ಹೊಟ್ಟೆ ಉರಿ ಸಮಸ್ಯೆಯಿಂದ ಬಳಲುವವರು ಪ್ರತಿ ದಿನ ಬೆಳಗ್ಗೆ ಒಂದು ಚಮಚ ತುಪ್ಪವನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಿ, ಬಿಸಿ ಬಿಸಿ ನೀರನ್ನು ಕುಡಿಯಿರಿ ಇದರಿಂದ ಖಂಡಿತ ಎದೆ ಉರಿ, ಹೊಟ್ಟೆ ಉರಿ, ಗ್ಯಾಸ್ಟ್ರಿಕ್ ಸಮಸ್ಯೆ ನಿವಾರಣೆಯಾಗುತ್ತದೆ. - ಹೃದಯ ಆರೋಗ್ಯ:
ಹೃದಯ ಸಂಬಂಧಿ ಕಾಯಿಲೆಗಳು ಬರದಂತೆ ತಡೆಯುವಲ್ಲಿ ತುಪ್ಪದ ಪಾತ್ರ ದೊಡ್ಡದಿದೆ. ದಿನವೂ ತುಪ್ಪವನ್ನು ಸೇವನೆ ಮಾಡಿದರೆ ಹೃದಯ ಸಂಬಂಧಿ ಕಾಯಿಲೆಗಳು ಬರುವುದನ್ನು ತಡೆಯಬಹುದು. - ಚರ್ಮ-ಕೂದಲು:
ತುಪ್ಪದಲ್ಲಿರುವ ಕೊಬ್ಬಿನಾಮ್ಲಗಳು ನಿಮ್ಮ ಚರ್ಮ ಮತ್ತು ಕೂದಲನ್ನು ಒಳಗಿನಿಂದ ಪೋಷಿಸುತ್ತದೆ. ಇದು ನಿಮ್ಮ ಚರ್ಮ ಮತ್ತು ನೆತ್ತಿಯನ್ನು ಹೈಡ್ರೇಟ್ ಮಾಡಲು ಸಹಾಯ ಮಾಡುತ್ತದೆ.