ಹೊಸದಿಗಂತ ಆನ್ಲೈನ್ ಡೆಸ್ಕ್:
ಅಮೆರಿಕದ ಟೆಕ್ಸಾಸ್ನಲ್ಲಿ ಗುಂಡಿನ ದಾಳಿ ನಡೆದಿದ್ದು, ಒಬ್ಬರು ಮೃತಪಟ್ಟಿದ್ದಾರೆ.
ಬ್ರಿಯಾನ್ನ ‘ಕೆಂಟ್ ಮೂರ್ ಕ್ಯಾಬಿನೇಟ್ಸ್’ ಕಂಪನಿಯ ಆವರಣದಲ್ಲಿ ಗುಂಡಿನ ದಾಳಿ ನಡೆದಿದ್ದು, ನಾಲ್ವರಿಗೆ ಗಂಭೀರ ಗಾಯಗಳಾಗಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ದಾಳಿ ಮಾಡಿದಾತ ‘ಕೆಂಟ್ ಮೂರ್ ಕ್ಯಾಬಿನೇಟ್ಸ್’ ಕಂಪನಿಯ ಉದ್ಯೋಗಿ ಎನ್ನುವ ಶಂಕೆ ಇದೆ. ಅಧಿಕಾರಿಗಳು ಧಾವಿಸಿದಂತೆ ದಾಳಿಕೋರ ಪರಾರಿಯಾಗಿದ್ದಾನೆ ಎಂದು ಬ್ರಿಯಾನ್ ಪೊಲೀಸ್ ಮುಖ್ಯಸ್ಥ ಎರಿಕ್ ಬಸ್ಕೆ ತಿಳಿಸಿದ್ದಾರೆ.
ಕಂಪನಿ ಉದ್ಯೋಗಿಗಳಿಂದ ಶಂಕಿತನ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ. ಒಬ್ಬರು ಪ್ರತ್ಯಕ್ಷದರ್ಶಿ ಶಂಕಿತನನ್ನು ಗುರುತಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.