Thursday, July 7, 2022

Latest Posts

ನಟ ಸುಶಾಂತ್ ಸಾವಿಗೆ ಒಂದು ವರ್ಷ: ಪ್ರಕರಣ ಕುರಿತು ಸಿಬಿಐನಿಂದ ಅಧಿಕೃತ ಹೇಳಿಕೆ ಬಿಡುಗಡೆ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………

ಹೊಸದಿಗಂತ ಆನ್ ಲೈನ್ ಡೆಸ್ಕ್:

ಸುಶಾಂತ್ ಸಿಂಗ್ ರಜಪೂತ್ ಸತ್ತು ಇಂದಿಗೆ ಒಂದು ವರ್ಷ ಪೂರ್ಣವಾಗಿದ್ದು, ಸಾವಿನ ಕುರಿತ ತನಿಖೆಯ ಇತ್ತೀಚಿನ ನವೀಕರಣವನ್ನು ಸಿಬಿಐ ಸೋಮವಾರ ಬಿಡುಗಡೆ ಮಾಡಿದೆ.
ಅಧಿಕೃತ ಹೇಳಿಕೆಯಲ್ಲಿ, ಕೇಂದ್ರ ತನಿಖಾ ಸಂಸ್ಥೆ ಅಧಿಕಾರಿಗಳು ಇನ್ನೂ ಎಲ್ಲಾ ಕೋನಗಳಿಂದ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ ಎಂದು ಉಲ್ಲೇಖಿಸಿದೆ.
ಸಿಬಿಐನಿಂದ ಅಧಿಕೃತ ಹೇಳಿಕೆಯಲ್ಲಿ, ‘ನಟ ಸುಶಾಂತ್ ಸಿಂಗ್ ರಜಪೂತ್ ಅವ್ರ ಸಾವಿಗೆ ಸಂಬಂಧಿಸಿದ ಸಿಬಿಐ ತನಿಖೆ ಇನ್ನೂ ಮುಂದುವರೆದಿದೆ ಮತ್ತು ಪ್ರಕರಣದ ಎಲ್ಲಾ ಅಂಶಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಲಾಗುತ್ತಿದೆ ಎಂದಿದೆ.
ಬಿಹಾರದಲ್ಲಿ ಸುಶಾಂತ್ ಅವರ ತಂದೆ ಸಲ್ಲಿಸಿದ್ದ ಪ್ರಕರಣವನ್ನ ಸಿಬಿಐ ವಹಿಸಿಕೊಂಡಿದೆ. ಮುಂಬೈ ಪೊಲೀಸರು ಇದನ್ನ ಆತ್ಮಹತ್ಯೆ ಪ್ರಕರಣ ಎಂದು ಕರೆದಿದ್ರೆ, ದಿವಂಗತ ನಟನ ಕುಟುಂಬವು ರಿಯಾ ಚಕ್ರವರ್ತಿ (ಸುಶಾಂತ್ ಸಾವಿನ ಸಮಯದಲ್ಲಿ ಅವರ ಗೆಳತಿ) ಮತ್ತು ಇತರರ ವಿರುದ್ಧ ಬಿಹಾರದ ರಾಜೀವ್ ನಗರ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಚೋದನೆ ನೀಡಿದ್ದಾರೆ ಎಂದು ಆರೋಪಿಸಿ ಎಫ್ ಐಆರ್ ದಾಖಲಿಸಿದ್ದಾರೆ. ಬಿಹಾರ ಸರ್ಕಾರ ಕೇಂದ್ರಕ್ಕೆ ಮನವಿ ಮಾಡಿದ ನಂತ್ರ ಮತ್ತು ಕೇಂದ್ರದ ಆದೇಶದ ಮೇರೆಗೆ, ಸಿಬಿಐ ಕಳೆದ ವರ್ಷದ ಆಗಸ್ಟ್ ನಿಂದ ಪ್ರಕರಣದ ತನಿಖೆಯನ್ನು ಪ್ರಾರಂಭಿಸಿತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss