ಅಕ್ರಮ ಮದ್ಯ ಮಾರಾಟದ ಆರೋಪಿಗೆ ಒಂದು ವರ್ಷ ಕಠಿಣ ಶಿಕ್ಷೆ, 10 ಸಾವಿರ ರೂ. ದಂಡ

ಹೊಸದಿಗಂತ ವರದಿ ವಿಜಯಪುರ:

ಅಕ್ರಮ ಮದ್ಯ ಮಾರಾಟ ಸಾಬೀತಾದ ಹಿನ್ನೆಲೆ ಆರೋಪಿಗೆ ಒಂದು ವರ್ಷ ಕಠಿಣ ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿ ಜಿಲ್ಲೆಯ ಇಂಡಿ ಜೆಎಂಎಫ್‌ಸಿ ನ್ಯಾಯಾಲಯ ಮಂಗಳವಾರ ತೀರ್ಪು ನೀಡಿದೆ.

ಲಗಶೆಪ್ಪ ಸಿದ್ರಾಮ ರೂಗಿ ಶಿಕ್ಷೆಗೊಳಗಾದ ಆರೋಪಿ.

ಅ. 23, 2021 ರಂದು ಇಂಡಿ ಪಟ್ಟಣದ ಸಾತಪೂರ್ ವಾರ್ಡ್‌ನಲ್ಲಿ ಅಕ್ರಮವಾಗಿ ಮದ್ಯ ಮಾರಾಟ ವೇಳೆ ಅಬಕಾರಿ ಉಪ ನಿರೀಕ್ಷಕರಾದ ಪರೀನಾ ವನಕ್ಯಾಳ ನೇತೃತ್ವದ ತಂಡ ದಾಳಿ ನಡೆಸಿ ಕೋರ್ಟ್‌ಗೆ ದೋಷಾರೋಪಣೆ ಪಟ್ಟಿ ಸಲ್ಲಿಸಿದರು. ಈ ಪ್ರಕರಣದ ವಾದವನ್ನು ಆಲಿಸಿದ ಜೆಎಂಎಫ್‌ಸಿ ನ್ಯಾಯಾಧೀಶರಾದ ಈಶ್ವರ ಎಸ್‌ಎಂ ಅವರು ಆರೋಪಿಗೆ ದಂಡ ಹಾಗೂ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.

ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕ ಇಬ್ರಾಹಿಂ ಗಚ್ಚಿನಮಾಲ್ ವಾದ ಮಂಡಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!