ತಲೆಕೂದಲು ದಪ್ಪ ಮತ್ತು ಉದ್ದವಾಗಿರಬೇಕೇ..? ಈರುಳ್ಳಿ ಮಿಶ್ರಣ ಬಳಸಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಈರುಳ್ಳಿ ಹಲವು ಔಷಧೀಯ ಗುಣಗಳನ್ನು ಹೊಂದಿರುವುದಲ್ಲದೆ ಇದು ಬ್ಯಾಕ್ಟೀರಿಯಾ ವಿರೋಧಿ ಮತ್ತು ಶಿಲೀಂಧ್ರ ವಿರೋಧಿ ಗುಣಗಳನ್ನು ಸಹ ಹೊಂದಿದೆ. ಈರುಳ್ಳಿ ವಿಶೇಷವಾಗಿ ಕೂದಲಿಗೆ ಅನೇಕ ಉಪಯೋಗಗಳನ್ನು ನೀಡುತ್ತದೆ. ಕೂದಲು ಉದುರುವಿಕೆಗೆ ಪವಾಡ ಪರಿಹಾರವಾಗಿದ್ದು, ಕೂದಲನ್ನು ದಪ್ಪ ಮತ್ತು ಬಲವಾಗಿ ಮಾಡುತ್ತದೆ. ತಲೆಹೊಟ್ಟು ಹೋಗಲಾಡಿಸಲು ಈರುಳ್ಳಿಯಲ್ಲಿರುವ ಸಲ್ಫರ್ ಸಹಾಯ ಮಾಡುತ್ತದೆ. ಅದಕ್ಕಾಗಿ ಈರುಳ್ಳಿ ಮಿಶ್ರಣವನ್ನು ತಯಾರಿಸಿ ಹಚ್ಚಿಕೊಳ್ಳಿ.

ಈರುಳ್ಳಿ ಮಿಶ್ರಣವನ್ನು ತಯಾರಿಸುವ ವಿಧಾನ;

ಮೊದಲು ಒಂದು ದೊಡ್ಡ ಈರುಳ್ಳಿಯನ್ನು ತೆಗೆದುಕೊಂಡು ಅದನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ಮಿಕ್ಸಿ ಜಾರ್‌ಗೆ ಹಾಕಿ. ನಂತರ ಅದಕ್ಕೆ ನಾಲ್ಕು ಕರಿಬೇವಿನ ಎಲೆ ಸೇರಿಸಿ ಈ ಕರಿಬೇವು ಕೂದಲು ಬುಡದಿಂದ ಬಲವಾಗಿರಿಸಲು ಮತ್ತು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ನಂತರ ಅದಕ್ಕೆ ಒಂದು ಚಮಚ ಕಲೋಂಜಿ ಕಪ್ಪು ಬೀಜದ ಎಣ್ಣೆ, ಟೀ ಟ್ರೀ ಎಣ್ಣೆ ಮೂರು ಅಥವಾ ನಾಲ್ಕು ಹನಿಗಳನ್ನು ಸೇರಿಸಿ ಇದು ನೆತ್ತಿಯ ತುರಿಕೆಯಂತಹ ಸಮಸ್ಯೆಗಳನ್ನು ನಿವಾರಿಸುತ್ತದೆ. ನಂತರ ಅದರಲ್ಲಿ ಎರಡು ಚಮಚ ಅಲೋವೆರಾ ತಿರುಳನ್ನು ಹಾಕಿ. ಈ ಅಲೋವೆರಾ ಜೆಲ್ ಕೂದಲಿನ ಬೆಳವಣಿಗೆಗೆ ಮತ್ತು ತಲೆಹೊಟ್ಟು ಹೋಗಲಾಡಿಸಲು ತುಂಬಾ ಸಹಾಯಕವಾಗಿದೆ.

ಈ ಎಲ್ಲವನ್ನು ಮಿಕ್ಸಿ ಜಾರಿಗೆ ಹಾಕಿ ನುಣ್ಣಗೆ ಪೇಸ್ಟ್‌ ಮಾಡಿಕೊಳ್ಳಿ. ಈ ಪೇಸ್ಟ್‌ ಅನ್ನು ಒಂದು ಬಟ್ಟಲಿಗೆ ವರ್ಗಾಯಿಸಿ ತಲೆಗೆ ಎಣ್ಣೆ ಹಚ್ಚದೆ ಒಣ ಕೂದಲಿಗೆ ಅಪ್ಲೈ ಮಾಡಿ ಅರ್ಧ ಗಂಟೆ ಒಣಗಲು ಬಿಡಿ. ನಂತರ ಶಾಂಪೂ ಬಳಸಿ ಸ್ನಾನ ಮಾಡಿ. ಈ ಮಿಶ್ರಣವನ್ನು ವಾರಕ್ಕೆ ಎರಡು ಅಥವಾ ಮೂರು ಬಾರಿ ಬಳಸುವುದರಿಂದ ಕೂದಲು ದಪ್ಪವಾಗಿರುತ್ತದೆ ಮತ್ತು ಬಲವಾಗಿರುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!