Sunday, August 14, 2022

Latest Posts

ಕಳೆದ ವರ್ಷಕ್ಕಿಂತ ಈ ವರ್ಷ ಈರುಳ್ಳಿ ದರ ಅಗ್ಗ: 5-12 ರೂ. ಇಳಿಕೆ ಕಂಡ ಬೆಲೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ತರಕಾರಿ ಬೆಲೆ ಏರಿಕೆ ನಿಯಂತ್ರಿಸುವ ನಿಟ್ಟಿನಲ್ಲಿ ಕೇಂದ್ರ ಕೈಗೊಂಡ ಕ್ರಮ ಫಲಕೊಟ್ಟಿದ್ದು, ಈರುಳ್ಳಿ ಬೆಲೆ ಕಳೆದ ವರ್ಷಕ್ಕಿಂತ ಈ ವರ್ಷ ಅಗ್ಗವಾಗಿದೆ ಎಂದು ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ ಹೇಳಿದೆ.
ದೇಶದಲ್ಲಿ ಸುರಿದ ಭಾರೀ ಮಳೆಯ ಹಿನ್ನೆಲೆ ಹಲವೆಡೆ ಈರುಳ್ಳಿ ಬೆಲೆಯಲ್ಲಿ ಏರಿಕೆಯಾಗಿತ್ತು, ದರ ಇಳಿಸುವ ನಿಟ್ಟಿನಲ್ಲಿ ಇಲಾಖೆ ಫಸ್ಟ್ ಇನ್ ಫಸ್ಟ್ ಔಟ್ ತತ್ವ ಬಳಸಿತ್ತು. ಇದರಿಂದ ಈರುಳ್ಳಿ ಹೆಚ್ಚು ಕಾಲ ಕೊಳೆಯದೆ ಬೇಗ ಗ್ರಾಹಕರ ಕೈ ಸೇರಲು ಸಹಾಯವಾಗುತ್ತಿತ್ತು.
ನವೆಂಬರ್ ತಿಂಗಳವರೆಗೆ ದೆಹಲಿ, ಕೋಲ್ಕತ್ತಾ, ಲಕ್ನೋ, ಪಾಟ್ನಾ, ರಾಂಚಿ, ಗುವಾಹಟಿ, ಭುವನೇಶ್ವರ, ಹೈದಾರಾಬಾದ್‌, ಬೆಂಗಳೂರು, ಚೆನ್ನೈ, ಮುಂಬೈ, ಚಂಡೀಗಢ, ಕೊಚ್ಚಿ ಹಾಗೂ ರಾಯಪುರದ ಮಾರುಕಟ್ಟೆಗಳಿಗೆ 1,11,376.17 ಮೆಟ್ರಿಕ್ ಟನ್ ನಷ್ಟು ಈರುಳ್ಳಿ ಬಿಡುಗಡೆ ಮಾಡಲಾಗಿದೆ. ಈರುಳ್ಳಿಯ ಕ್ವಿಂಟಾಲ್‌ಗೆ 3215.92 ರೂ. ಆಗಿದ್ದು, ಇದರಿಂದ ಮಾರುಕಟ್ಟೆಗಳಲ್ಲಿ ಈರುಳ್ಳಿ ಬೆಲೆ 5ರಿಂದ 12 ರೂ. ಅಗ್ಗವಾಗಿದೆ.
ಚಿಲ್ಲರೆ ಅಂಗಡಿಗಳಲ್ಲಿ ಕೆ.ಜಿ. ಈರುಳ್ಳಿ ದರ 40.13 ರೂ.ರಷ್ಟಿದೆ, ಆದರೆ ಸಗಟು ಮಾರುಕಟ್ಟೆಯಲ್ಲಿ ಕೆ.ಜಿ.ಗೆ 31.15 ರೂ. ಇದೆ ಎಂದು ಇಲಾಖೆ ತಿಳಿಸಿದೆ.
ದೆಹಲಿಯಲ್ಲಿ ಕೆ.ಜಿ ಈರುಳ್ಳಿ ಈಗ 44 ರೂ.ಗೆ ಇಳಿದಿದೆ. ಮುಂಬೈನಲ್ಲಿ 45 ರೂ., ಕೊಲ್ಕತ್ತಾದಲ್ಲಿ 45 ರೂ., ಚೆನ್ನೈಯಲ್ಲಿ 37 ರೂ. ಹಾಗೂ ಬೆಂಗಳೂರಿನಲ್ಲಿ ಕೆ.ಜಿ. ಈರುಳ್ಳಿ ಬೆಲೆ 25ಕ್ಕೆ ಇಳಿಕೆಯಾಗಿದೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss