ಹೊಸದಿಗಂತ ಡಿಜಿಟಲ್ ಡೆಸ್ಕ್:
ಶಬರಿಮಲೆ ಅಯ್ಯಪ್ಪನ ದರುಶನಕ್ಕೆ ಇನ್ಮುಂದೆ ಯಾತ್ರಾರ್ಥಿಗಳಿಗೆ ಆನ್‌ಲೈನ್ ಬುಕ್ಕಿಂಗ್ ಮೂಲಕ ಮಾತ್ರ ಅವಕಾಶ ನೀಡಲಾಗುವುದು. ಮತ್ತು ದಿನಕ್ಕೆ ಗರಿಷ್ಠ 80,000 ಜನರಿಗೆ ಮಾತ್ರ ದರ್ಶನಕ್ಕೆ ಅವಕಾಶ ನೀಡಲಾಗುವುದು ಎಂದು ಕೇರಳ ಸರ್ಕಾರ ಶನಿವಾರ(ಅಕ್ಟೋಬರ್ 5) ಹೇಳಿದೆ.
ಇನ್ನೊಂದು ತಿಂಗಳಲ್ಲಿ ಮಕರವಿಳಕ್ಕು ಸೀಸನ್ ಆರಂಭವಾಗಲಿದ್ದು, ವರ್ಚುವಲ್ ಕ್ಯೂ ಬುಕಿಂಗ್ ಸಮಯದಲ್ಲಿ ಪ್ರಯಾಣದ ಮಾರ್ಗವನ್ನು ಆಯ್ಕೆ ಮಾಡಲು ಅವಕಾಶವನ್ನು ಒದಗಿಸಲಾಗುತ್ತದೆ. ಹೀಗಾಗಿ ಯಾತ್ರಾರ್ಥಿಗಳು ಕಡಿಮೆ ಜನಸಂದಣಿ ಇರುವ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳಬಹುದು ಎಂದು ಸಿಎಂಒ ಹೇಳಿಕೆಯಲ್ಲಿ ತಿಳಿಸಿದೆ.
ಮಕರವಿಳಕ್ಕು ಕಾಲದಲ್ಲಿ ಭಕ್ತರ ದಂಡು ಅಧಿಕವಾಗಿರುತ್ತದೆ. ಅದಕ್ಕಾಗಿ ರಾಜ್ಯ ಸರ್ಕಾರ ಮೊದಲೇ ಮುಂಜಾಗ್ರತಾ ಕ್ರಮಕೈಗೊಂಡಿದೆ .