Wednesday, September 28, 2022

Latest Posts

ಆನ್ಲೈನ್, ದೂರಶಿಕ್ಷಣ ಪದವಿಗಳು ಸಾಂಪ್ರದಾಯಿಕ ಪದವಿಗಳಿಗೆ ಸಮಾನ: UGC ಘೋಷಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಮುಕ್ತ, ದೂರ ಅಥವಾ ಆನ್ಲೈನ್ ಮೋಡ್ ಮೂಲಕ ಪಡೆದ ಎಲ್ಲಾ ಪದವಿ ಮತ್ತು ಸ್ನಾತಕೋತ್ತರ ಪದವಿಗಳು ಸಾಂಪ್ರದಾಯಿಕ ವಿಧಾನದ ಮೂಲಕ ನೀಡಲಾಗುವ ಇತರ ಪದವಿಗಳಿಗೆ ಸಮಾನ ಎಂದು ವಿಶ್ವವಿದ್ಯಾಲಯ ಧನಸಹಾಯ ಆಯೋಗ (UGC) ಘೋಷಿಸಿದೆ.

ಯುಜಿಸಿ ಹೊರಡಿಸಿದ ಅಧಿಸೂಚನೆಯ ಪ್ರಕಾರ,ಆಯೋಗವು ನಿಗದಿಪಡಿಸಿದ ನಿಯಮಗಳ ಅಡಿಯಲ್ಲಿ ಪದವಿ ನೀಡುವ ಉನ್ನತ ಶಿಕ್ಷಣ ಸಂಸ್ಥೆಗಳು ಮಾನ್ಯತೆ ಪಡೆದಿದ್ದರೆ, ಪದವಿ ಮತ್ತು ಸ್ನಾತಕೋತ್ತರ ಪದವಿಯ ಎಲ್ಲಾ ಆನ್ಲೈನ್ ಪದವಿಗಳನ್ನ ಸಾಂಪ್ರದಾಯಿಕ ವಿಧಾನದ ಮೂಲಕ ಪಡೆದ ಪದವಿಗೆ ಸಮಾನವಾಗಿ ಪರಿಗಣಿಸಬೇಕು.

ಯುಜಿಸಿ ಕಾರ್ಯದರ್ಶಿ ರಜನೀಶ್ ಜೈನ್ ಮಾತನಾಡಿ, ಪದವಿ ಸ್ಪೆಷಾಲಿಟಿ 2014ರ ಯುಜಿಸಿ ಅಧಿಸೂಚನೆಯ ಪ್ರಕಾರ, ಉನ್ನತ ಶಿಕ್ಷಣ ಸಂಸ್ಥೆಗಳು ಪದವಿ ಮತ್ತು ಸ್ನಾತಕೋತ್ತರ ಹಂತದಲ್ಲಿ ಮುಕ್ತ, ದೂರ ಅಥವಾ ಆನ್ಲೈನ್ ಮೂಲಕ ನೀಡುವ ಪದವಿಗಳು ಮತ್ತು ಡಿಪ್ಲೊಮಾಗಳನ್ನ ಸಾಂಪ್ರದಾಯಿಕ ವಿಧಾನದ ಮೂಲಕ ಪಡೆದ ಪದವಿಗಳು ಮತ್ತು ಡಿಪ್ಲೊಮಾಗಳಿಗೆ ಸಮಾನವಾಗಿ ಪರಿಗಣಿಸಲಾಗುತ್ತದೆ ಎಂದು ಹೇಳಿದರು.

ಇನ್ನು ವಿಶ್ವವಿದ್ಯಾಲಯ ಧನಸಹಾಯ ಆಯೋಗದ (ಮುಕ್ತ ಮತ್ತು ದೂರಶಿಕ್ಷಣ ಕಾರ್ಯಕ್ರಮ ಮತ್ತು ಆನ್ಲೈನ್ ಕಾರ್ಯಕ್ರಮ) ನಿಯಮಗಳು, 2020ರ ನಿಯಮ 22ರ ಪ್ರಕಾರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!