Wednesday, August 10, 2022

Latest Posts

ಆನ್ಲೈನ್ ಆ್ಯಪ್ ಗಳಲ್ಲಿ ಆಹಾರ ತರಿಸಿಕೊಳ್ಳೋರಿಗೆ ಸದ್ಯದಲ್ಲೇ ತಾಗೀತು ತೆರಿಗೆ ಬಿಸಿ

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಜೊಮಾಟೊ, ಸ್ವಿಗ್ಗಿಯಂತಹ ಆನ್‌ಲೈನ್ ಪುಡ್ ಡೆಲಿವರಿ ಆ್ಯಪ್ ಮೂಲಕ ಪದೇ ಪದೇ ಫುಡ್ ಆರ್ಡರ್ ಮಾಡುವವರಿಗೆ ಇದು ಬ್ಯಾಡ್ ನ್ಯೂಸ್.

ಏಕೆಂದರೆ ಆ್ಯಪ್ ಆಧಾರಿತ ಇ-ಕಾಮರ್ಸ್ ಆಪರೇಟರ್‌ಗಳು (ವಾಣಿಜ್ಯ ಉದ್ದೇಶಕ್ಕಾಗಿ ಡಿಜಿಟಲ್ ಪ್ಲಾಟ್‌ಫಾರ್ಮ್ ಅನ್ನು ಹೊಂದಿರುವ ಅಥವಾ ನಿರ್ವಹಿಸುವ ಯಾವುದೇ ವ್ಯಕ್ತಿ) ನೀಡುವ ಫುಡ್ ಡೆಲಿವರಿ ಸೇವೆಗಳ ಮೇಲೆ ಶ್ರೀಘ್ರವೇ ಜಿಎಸ್ ಟಿ ( ಸರಕು ಮತ್ತು ಸೇವಾ ತೆರಿಗೆ) ವಿಧಿಸುವ ಯೋಚನೆ ನಡೆದಿದೆ.

ಸೆಪ್ಟೆಂಬರ್ 17 ರಂದು ನಡೆಯಲಿರುವ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಈ ಕುರಿತಂತೆ ಎರಡು ಮಹತ್ವದ ವಿಷಯಗಳ ಬಗ್ಗೆ ಚರ್ಚಿಸಲಾಗುತ್ತದೆ.

ಮೊದಲನೆಯದು ಆರ್ಥಿಕ ಸಹಕಾರ ಸಂಸ್ಥೆಗಳನ್ನು (ECO) ಪರಿಗಣಿತ ಪೂರೈಕೆದಾರರನ್ನು (deemed suppliers) ಎರಡು ವಿಭಾಗ ಮಾಡಿ, ರೆಸ್ಟೋರೆಂಟ್‌ನಿಂದ ಇಸಿಒ ಗೆ 5 % ತೆರಿಗೆ ದರ ಮತ್ತು 18 % ಇನ್ಪುಟ್ ಕ್ರೆಡಿಟ್‌ನೊಂದಿಗೆ ಇಸಿಒ ಯಿಂದ ಗ್ರಾಹಕನಿಗೆ 5 % ಜಿಎಸ್ ಟಿ ತೆರಿಗೆ ವಿಧಿಸುವುದು.

ಎರಡನೆಯ ಪ್ರಸ್ತಾಪವೆಂದರೆ ಇಸಿಒಗಳನ್ನು ಒಟ್ಟುಗೂಡಿಸಿ ಈ ಜಿಎಸ್ ಟಿ ವಿಧಿಸುವ ಬಗ್ಗೆ ಸೂಚಿಸಿ ನಂತರ ಜಿಎಸ್ ಟಿ ದರ ನಿಗದಿಪಡಿಸುವುದು.

ಸರ್ಕಾರದ ವರದಿ ಪ್ರಕಾರ ಪುಡ್ ಡೆಲಿವರಿ ವೇದಿಕೆಯು ಈಗ ವೇಗದಲ್ಲಿ ಅಭಿವೃದ್ಧಿ ಹೊಂದಿತ್ತಿರುವ ವ್ಯವಹಾರವಾಗಿದ್ದು, ಜಿಎಸ್‌ಟಿ ಕೌನ್ಸಿಲ್ ಈ ವಿಭಾಗದಲ್ಲಿ 2,000 ಕೋಟಿ ರೂಪಾಯಿಗಳಷ್ಟು ನಷ್ಟವಾಗುತ್ತಿರುವ ಬಗ್ಗೆ ಅಂದಾಜಿಸಿದೆ. ಏಕೆಂದರೆ, ಸ್ವಿಗ್ಗಿ ಹಾಗೂ ಜೊಮಾಟೋಗಳಂಥ ಕಂಪನಿಗಳು ಕಟ್ಟುತ್ತಿರುವ ತೆರಿಗೆ ಹಣಕ್ಕೂ ಹಾಗೂ ಇವರಿಗೆ ಆಹಾರ ಪೂರೈಸುತ್ತಿರುವವರಿಂದ ಸಂಗ್ರಹವಾಗುತ್ತಿರುವ ಮೊತ್ತಕ್ಕೂ ಬಹಳ ಅಂತರಗಳು ಇರುವುದು ಅಧ್ಯಯನದಲ್ಲಿ ಕಂಡುಬಂದಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss