Tuesday, July 5, 2022

Latest Posts

“ನಾಗರಿಕ ಸಮಾಜ” ಹೆಸರಿನಲ್ಲಿ ದೇಶಗಳಲ್ಲಿ ಅರಾಜಕತೆ ಸೃಷ್ಟಿಸಲು ‘ಓಪನ್ ಸೊಸೈಟಿ ’ಸಂಚು!

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………………………….

ಹೊಸದಿಗಂತ ಆನ್ ಲೈನ್ ಡೆಸ್ಕ್:

ಬಿಲಿಯಾಶ ಜಾರ್ಜ್ ಸೊರೋಸ್‌ನ ಓಪನ್ ಸೊಸೈಟಿ ಫೌಂಡೇಶನ್ಸ್ “ನಾಗರಿಕ ಸಮಾಜ ಸ್ಥಾಪನೆ “ಹೆಸರಿನಲ್ಲಿ ಜಗತ್ತಿನ ದೇಶಗಳ ರಾಷ್ಟ್ರೀಯ ಸುರಕ್ಷತೆಗೆ ಬೆದರಿಕೆ ಒಡ್ಡುತ್ತಿರುವ ಗಂಭೀರ ಆರೋಪ ಕೇಳಿಬಂದಿದೆ. ಕಳೆದ ವರ್ಷ ಅಮೆರಿಕದಲ್ಲಿ ಕಪ್ಪು ವರ್ಣೀಯನೊಬ್ಬನ ಸಾವಿನ ಪ್ರಕರಣವನ್ನೇ ಬಳಸಿಕೊಂಡು ಅಲ್ಲಿ ನಡೆದ ಅಶಾಂತಿಯ ಹಿಂದೆಯೂ ಈ ಗುಂಪಿನ ಕೈವಾಡವಿತ್ತು ಎಂಬುದೀಗ ಬೆಳಕಿಗೆ ಬಂದಿದ್ದು, ರಶ್ಯಾ ಕೂಡಾ ಈತನ ಸಂಘಟನೆಗೆ ನಿಷೇಧ ಹೇರಿದ್ದು, ಇದು ರಶ್ಯಾದ ಸಾಂವಿಧಾನಿಕ ವ್ಯವಸ್ಥೆಗೆ ಬೆದರಿಕೆ ಎಂದು ಬೊಟ್ಟು ಮಾಡಿದೆ.

ಹೆಡ್ಗೆ ಫಂಡ್ ಮ್ಯಾನೇಜರ್ ಜಾರ್ಜ್ ಸೊರೋಸ್ ಮಿಲಿಯಗಟ್ಟಲೆ ಡಾಲರ್‌ಗಳನ್ನು ವಿವಿಧ ನಾಗರಿಕ ಸಹಾಯ ಮತ್ತು “ನಾಗರಿಕ ಸಮಾಜ ಸ್ಥಾಪನೆ ಪ್ರಯತ್ನ”ಗಳ ಹೆಸರಿನಲ್ಲಿ ಸುರಿದು ವಿವಿಧ ದೇಶಗಳ ರಾಜಕೀಯ ವ್ಯವಸ್ಥೆಯನ್ನೇ ಬದಲಿಸಲು ಹುನ್ನಾರ ನಡೆಸಿರುವುದಾಗಿ ಹೇಳಲಾಗಿದ್ದು, ಈತನ ಓಪನ್ ಸೊಸೈಟಿ ಫೌಂಡೇಶನ್ಸ್‌ನ ಚಟುವಟಿಕೆಗಳನ್ನು ರಶ್ಯಾ ೨೦೧೫ರಲ್ಲೇ ನಿಷೇಸಿತ್ತು.೧೯೯೩ರಲ್ಲಿ ಸ್ಥಾಪನೆಗೊಂಡ ಈ ಗುಂಪು ವಿವಿಧ ದೇಶಗಳಲ್ಲಿ ಕಾರ್ಯಾಚರಿಸುತ್ತಿದ್ದು , ಅಮೆರಿಕದ ನ್ಯೂಯಾರ್ಕಿನಲ್ಲಿ ಕೇಂದ್ರ ಕಚೇರಿ ಹೊಂದಿದೆ.

ಈ ಗುಂಪು ಅಮೆರಿಕದಲ್ಲಿ ಕಳೆದ ವರ್ಷ ಪೊಲೀಸರಿಂದ ಹತ್ಯೆಗೀಡಾದ ಜಾರ್ಜ್ ಫ್ಲಾಯ್ಡ್ ಎಂಬಾತನ ಸಾವನ್ನೇ ನೆವವಾಗಿರಿಸಿಕೊಂಡು ಸೃಷ್ಟಿಸಲಾದ ಹಿಂಸೆ, ಕ್ಷೆಭೆಯ ಹಿಂದೆ ಸಕ್ರಿಯವಾಗಿ ಕೆಲಸ ಮಾಡಿತ್ತು ಎಂಬುದನ್ನು ರಶ್ಯಾದ ಭದ್ರತಾ ಮಂಡಳಿ ಮುಖ್ಯಸ್ಥ ನಿಕೋಲಾಯಿ ಪಟ್ರುಷೇವ್ ರಶ್ಯಾದ ಮಾಧ್ಯಮಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ .

ಈ ಗುಂಪು ಅಮೆರಿಕದಲ್ಲಿ ಹಿಂದಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಅಧಿಕಾರದಿಂದ ಇಳಿಸಲು ಮತ್ತು ಜೊ ಬಿಡೈನ್ ಅವರನ್ನು ಅಧ್ಯಕ್ಷರನ್ನಾಗಿಸುವಲ್ಲೂ ಬಿಲಿಯಗಟ್ಟಲೆ ಡಾಲರ್‌ಗಳನ್ನು ಚೆಲ್ಲಿದೆ ಎನ್ನಲಾಗಿದೆ. ಈ ಗುಂಪನ್ನು ನಿಷೇಧಿಸಬೇಕೆಂದು ಲಕ್ಷಾಂತರ ಅಮೆರಿಕನ್ನರು ಈ ಹಿಂದೆ ಸಹಿ ಅಭಿಯಾನ ನಡೆಸಿದ್ದರು. ಅಲ್ಲದೆ ಫ್ರಾನ್ಸ್ ಸೇರಿದಂತೆ ಯುರೋಪಿನಲ್ಲೂ ಈ ಗುಂಪಿನ ವಿರುದ್ಧ ಸರಕಾರಗಳು ಕಾನೂನು ಕ್ರಮಕ್ಕೆ ಮುಂದಾಗಿದ್ದವು. ಭಾರತದಲ್ಲೂ ಎನ್‌ಜಿಒ ಹೆಸರಿನಲ್ಲಿ ಕಾರ್ಯಾಚರಿಸುತ್ತಿರುವ ಈ ಗುಂಪನ್ನು ಸರಕಾರ ನಿಗಾ ಪಟ್ಟಿಯಲ್ಲಿಟ್ಟಿದೆ.

ಇಂದು ವಿವಿಧ ಸಾರ್ವಭೌಮ ದೇಶಗಳಲ್ಲಿ ಪಟ್ಟಭದ್ರ ಹಿತಾಸಕ್ತಿಗಳು ಸೃಷ್ಟಿಸುವ ಅರಾಜಕ ವ್ಯವಸ್ಥೆಯನ್ನು ತಡೆಯುವುದೇ ಒಂದು ದೊಡ್ಡ ಸವಾಲಾಗಿದ್ದು, ನಾಗರಿಕ ದೇಶವೊಂದರಲ್ಲಿ ಅರಾಜಕ ಪರಿಸ್ಥಿತಿ ಸೃಷ್ಟಿಯಾಗುತ್ತಿದೆ ಎಂದರೆ ಅದರ ಹಿಂದೆ ಇಂತಹ ಕಾರಸ್ಥಾನ ಇರುತ್ತದೆ ಎಂಬುದನ್ನು ಈಗ ಗುರುತಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಕಳೆದ ವರ್ಷ ಭಾರತದಲ್ಲಿ ಸಿಎಎ ವಿರುದ್ಧ ನಡೆದ ಪ್ರತಿಭಟನೆ, ಅನಂತರ ರೈತರ ಹೆಸರಿನಲ್ಲಿ ಆಯೋಜಿಸಲಾದ ಪ್ರತಿಭಟನೆಗಳ ಹಿಂದೆ ಅಂತಾರಾಷ್ಟ್ರೀಯ ಹಿತಾಸಕ್ತಿಗಳ ಕೈವಾಡವಿದ್ದ ಬಗ್ಗೆ ಗಂಭೀರ ಆರೋಪಗಳು ಕೇಳಿಬಂದಿರುವುದನ್ನು ಇಲ್ಲಿ ಸ್ಮರಿಸಬಹುದು.

ಅನೇಕ ಬಾರಿ ಜನತೆಗೆ ಗೊತ್ತಿಲ್ಲದೆಯೇ ಯಾವುದೋ ಭಾವನಾತ್ಮಕ ಅಂಶಗಳನ್ನು ಮುಂದಿಟ್ಟುಕೊಂಡು ದೇಶದ ಜನತೆಯನ್ನೇ ತಮ್ಮ ದೇಶದ ಸರಕಾರ ಅಥವಾ ವ್ಯವಸ್ಥೆಯ ವಿರುದ್ಧ ಅಪನಂಬಿಕೆ ಹುಟ್ಟುವಂತೆ ಮಾಡಿ ಅವರನ್ನು ವ್ಯವಸ್ಥೆಯ ವಿರುದ್ಧ ಎತ್ತಿಕಟ್ಟಿ ಇಂತಹ ಅರಾಜಕತೆ ಪರಿಸ್ಥಿತಿಯನ್ನು ಸೃಷ್ಟಿಸಲು ವ್ಯವಸ್ಥಿತವಾಗಿ ಷಡ್ಯಂತ್ರಗಳು ನಡೆಯುತ್ತವೆ . ಇದರ ಹಿಂದೆ ಈ ‘ನಾಗರಿಕ ಸಮಾಜ’ದಂತಹ ಹೆಸರುಗಳನ್ನು ಇಟ್ಟುಕೊಂಡು ಕಾರ್ಯಾಚರಿಸುವ ಅನೇಕ ಎನ್‌ಜಿಒಗಳಿರುವುದನ್ನು ಗಮನಿಸಬಹುದು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss