ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………
ಹೊಸದಿಗಂತ ಆನ್ಲೈನ್ ಡೆಸ್ಕ್:
ನಾಯಿಗಳು ಅಪವಿತ್ರ ಎಂದು ಭಾವಿಸುವ ತಾಲಿಬಾನಿಗಳ ಆಕ್ರಮಿತ ನೆಲದಲ್ಲಿ ಸಾಕುಪ್ರಾಣಿಗಳ ಕಥೆ ಏನಾಗಿರಬಹುದು?
ಮನುಷ್ಯರೇ ಆಫ್ಘನ್ನಿಂದ ತಪ್ಪಿಸಿಕೊಂಡು ಓಡಲು ಯತ್ನಿಸುತ್ತಿರುವಾಗ ಇಲ್ಲೊಬ್ಬ ವ್ಯಕ್ತಿ ನಾಯಿ, ಬೆಕ್ಕುಗಳ ಬಗ್ಗೆ ಆಲೋಚಿಸುತ್ತಿದ್ದಾರೆ.
ಈತನ ಹೆಸರು ಪೌಲ್ ಪೆನ್ ಆಫ್ಘನ್ನಲ್ಲಿ ಈತನ ಎನ್ಜಿಒ ಇದೆ. ಇದರಲ್ಲಿ 140 ನಾಯಿಗಳು ಹಾಗೂ 60 ಬೆಕ್ಕುಗಳಿವೆ.
ಅವುಗಳನ್ನು ಆಫ್ಘನ್ನಲ್ಲಿಯೇ ಬಿಡಲು ಇಚ್ಛಿಸದ ಪೌಲ್ ಬೇರೆ ದೇಶಕ್ಕೆ ತನ್ನ ಪ್ರಾಣಿಗಳನ್ನು ಕರೆದೊಯ್ಯಲು ‘ಆಪರೇಷನ್ ಆರ್ಕ್’ ಹೆಣೆದಿದ್ದಾರೆ.
ನೌಕಾಪಡೆಯ ಮಾಜಿ ಅಧಿಕಾರಿ ಆಗಿರುವ ಪೌಕ್, 2009ರಲ್ಲಿ ಎನ್ಜಿಒ ಒಂದನ್ನು ಸ್ಥಾಪಿಸಿದ್ದರು. ನಾಯಿಗಳು ಅಪವಿತ್ರ ಎನ್ನುವ ತಾಲಿಬಾನಿಗಳ ನಡುವೆ ತನ್ನ ನಾಯಿಗಳ ರಕ್ಷಣೆಗೆ ಪೌಲ್ ನಿಂತಿದ್ದಾರೆ.
ಈ ಪ್ರಯತ್ನಕ್ಕೆ ಬ್ರಿಟನ್ ಸರ್ಕಾರ ನೆರವಾಗಿದ್ದು, ಎನ್ಜಿಒ ಸಿಬ್ಬಂದಿ ಹಾಗೂ ಪ್ರಾಣಿಗಳಿಗೆ ವೀಸಾ ನೀಡಿದೆ.
ತಾಲಿಬಾನಿಗಳು ನಾಯಿಗಳು ಅಪವಿತ್ರ ಎಂದು ಭಾವಿಸುತ್ತಾರೆ. ಜೊತೆಗೆ ಈ ಹಿಂದೆ ನಾಯಿ ಸಾಕುವಿಕೆಯನ್ನೂ ತಾಲಿಬಾನಿಗಳು ನಿಷೇಧಿಸಿದ್ದರು.