ʼಆಪರೇಷನ್‌ ಆಕ್ಟೋಪಸ್ʼ:‌ ಹೇಗಿತ್ತು ಭಾರತೀಯ ಗುಪ್ತಚರ ಸಂಸ್ಥೆ ಪಿಎಫ್‌ಐ ಗೆ ನೀಡಿದ ಮಾಸ್ಟರ್‌ ಸ್ಟ್ರೋಕ್‌ !

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ದೇಶವ್ಯಾಪಿಯಾಗಿ ಹರಡಿರೋ ಇಸ್ಲಾಮಿಕ್‌ ಮೂಲಭೂತವಾದಿ ಸಂಘಟನೆಯ ವಿಷಜಾಲವನ್ನು ಭೇಧಿಸಲು ಭಾರತೀಯ ಗುಪ್ತಚರ ಸಂಸ್ಥೆಯ ಅಧಿಕಾರಿಗಳು ಸಫಲರಾಗಿದ್ದಾರೆ. ದೇಶದಲ್ಲಿದ್ದುಕೊಂಡೇ ಗಲಭೆ, ಉಗ್ರವಾದದಂತಹ ಭಯಾನಕ ಕೃತ್ಯಗಳನ್ನು ಪೋಷಿಸುತ್ತಿದ್ದ ಸಂಘಟನೆಯ ಬೆನ್ನೆಲುಬು ಮುರಿದಿದ್ದಾರೆ ಭಾರತದ ಭದ್ರತಾ ಅಧಿಕಾರಿಗಳು. ಇದುವರೆಗೆ ದೇಶದಲ್ಲಿ ನಡೆದ ಅತಿ ದೊಡ್ಡ ಸಂಯೋಜಿತ ದಾಳಿಯಿದು ಎಂದು ಹೇಳಲಾಗುತ್ತಿದೆ. ಈ ದಾಳಿಯ ಕುರಿತಾಗಿ ಹಲವು ಮೂಲಗಳಿಂದ ಸಂಗ್ರಹಿಸಿದ ಕೆಲ ಆಸಕ್ತಿಕರ ವಿವರಣೆ ಇಲ್ಲಿದೆ.

ಪಿಎಫ್‌ಐ ಮೇಲಿನ ಮಾಸ್ಟರ್‌ ಸ್ಟ್ರೋಕ್‌ ʼಆಪರೇಷನ್‌ ಆಕ್ಟೋಪಸ್‌ʼ:
ಪಿಎಫ್‌ಐ ಎಂಬ ಸಂಘಟನೆಯ ಮುಖವಾಡ ಹಾಕಿಕೊಂಡು ಇಸ್ಲಾಮಿಕ್‌ ಶಕ್ತಿಗಳು ಭಾರತದ ವಿರುದ್ಧ ಸಂಚು ರೂಪಿಸುತ್ತಿವೆ ಎಂಬ ಮಾಹಿತಿ ಗುಪ್ತಚರ ಸಂಸ್ಥೆಗೆ ವರ್ಷಗಳ ಹಿಂದೆಯೇ ಸಿಕ್ಕಿತ್ತು. ಈ ಜಾಡನ್ನು ಬೆಂಬತ್ತಿ ಹೊರಟ ಗುಪ್ತಚರ ಅಧಿಕಾರಿಗಳಿಗೆ ಇದು ದೇಶದಲ್ಲಿ ಹರಡಿಕೊಂಡಿರುವ ವ್ಯಾಪಕತೆಯ ಬಗ್ಗೆ ತಿಳಿಯಿತು. ಈ ಹಿನ್ನೆಲೆಯಲ್ಲಿ ದೇಶದಾದ್ಯಂತ ಏಕಕಾಲದಲ್ಲಿ ಸಂಯೋಜಿತ ದಾಳಿ ನಡೆಸಲು ಅಧಿಕಾರಿಗಳು ಯೋಚಿಸಿದರು. ಕಾರ್ಯಾಚರಣೆಗೆ ವ್ಯವಸ್ಥಿತ ಯೋಜನೆಯೂ ಸಿದ್ಧವಾಯಿತು. ಆ ಕಾರ್ಯಾಚರಣೆಗೆ ಇಟ್ಟ ಹೆಸರೇ ʼಆಪರೇಷನ್‌ ಆಕ್ಟೋಪಸ್‌ʼ.

ತಿಂಗಳುಗಳ ಕಾಲ ಬೆಂಬತ್ತಿ ಮಾಹಿತಿ ಕಲೆ ಹಾಕಿತು ಐಬಿ:
ಪಿಎಫ್‌ಐ ಕುರಿತು ಆತಂಕಕಾರಿ ಇನ್‌ಪುಟ್‌ ದೊರೆತ ಬೆನ್ನಲ್ಲೇ ಇಂಟೆಲಿಜೆನ್ಸ್‌ ಬ್ಯೂರೋ ಎಚ್ಚೆತ್ತುಕೊಂಡಿತು. ತನ್ನ ಗುಪ್ತಚರ ಜಾಲವನ್ನು ಬಳಸಿಕೊಂಡು ಪಿಎಫ್‌ಐ ಸಂಘಟನೆಯಲ್ಲಿ ಅನುಮಾನಾಸ್ಪದ ಚಟುವಟಿಕೆಯಲ್ಲಿ ತೊಡಗಿರುವವರನ್ನು ಗುರುತಿಸಲಾಯಿತು. ಅವರನ್ನು ತಿಂಗಳುಗಳ ಕಾಲ ಬೆಂಬತ್ತಿದ ಐಬಿ ಅಧಿಕಾರಿಗಳು ಅವರ ಕುರಿತಾಗಿ ಸಂಪೂರ್ಣ ಮಾಹಿತಿ ಕಲೆ ಹಾಕಿದರು. ಆಪರೇಷನ್‌ ಆಕ್ಟೋಪಸ್‌ ಯೋಜನೆ ಸಿದ್ಧವಾಗುವಷ್ಟರಲ್ಲಿ ಯೋಜನೆಗೆ ಬೇಕಿದ್ದ ಎಲ್ಲಾ ಮಾಹಿತಿಗಳನ್ನೂ ಕಲೆ ಹಾಕಿತ್ತು ಇಂಟೆಲಿಜೆನ್ಸ್‌ ಬ್ಯೂರೋ.

Intelligence Bureau (IB): Meaning, Role, Work, Importance & Facts: Meaning, Role, Inportance & Facts of IB

ಧೋವಲ್‌ ಸಾರಥ್ಯ, ರಾಜ್ಯ ಪೋಲೀಸರೊಂದಿಗೆ ಸಭೆ:
ಈ ಎಲ್ಲ ಯೋಜನೆಗಳು ಸಿದ್ಧವಾದಂತೆ ಅದನ್ನು ಕಾರ್ಯಗತಗೊಳಿಸುವ ಕುರಿತು ಚಿಂತನೆ ನಡೆಸಲಾಯಿತು. ಆಂತರಿಕ ಭದ್ರತೆಯ ವಿಷಯಬಂದಾಗ ಭಯೋತ್ಪಾದಕರಿಗೆ ಅಡ್ಡಗೋಡೆಯಾಗಿ ಟೊಂಕ ಕಟ್ಟಿನಿಲ್ಲಲು ಸದಾ ಸಿದ್ಧರಾಗಿರುವ ಭಾರತದ ರಕ್ಷಣಾ ಸಲಹೆಗಾರ ಅಜಿತ್‌ ಧೋವಲ್‌ ಈ ಕಾರ್ಯಾಚರಣೆಯ ಮೇಲುಸ್ತುವಾರಿ ವಹಿಸಿಕೊಂಡರು.

15ಕ್ಕೂ ಹೆಚ್ಚು ರಾಜ್ಯಗಳಲ್ಲಿ ಏಕಕಾಲದಲ್ಲಿ ಕಾರ್ಯಾಚರಣೆ ನಡೆಸಬೇಕೆಂದರೆ ಅದು ಸುಲಭದ ವಿಚಾರವಲ್ಲ. ಒಂಚೂರು ಸುಳಿವು ಸಿಕ್ಕರೂ ಪಿಎಫ್‌ಐ ಪುಂಡರು ಪತ್ತೆಹಚ್ಚಲಾಗದಂತೆ ಬಿಲಗಳಲ್ಲಿ ಅಡಗಿ ಕುಳಿತುಕೊಂಡುಬಿಡುತ್ತಾರೆ. ಈ ಹಿನ್ನೆಲೆಯಲ್ಲಿ ಒಂಚೂರೂ ಮಾಹಿತಿ ಸೋರಿಕೆಯಾಗದಂತೆ ಮುತುವರ್ಜಿ ವಹಿಸಬೇಕು. ರಾಜ್ಯ ಪೋಲೀಸ್‌ ಪಡೆಯ ಮುಖ್ಯಸ್ಥರೊಂದಿಗೆ ಚರ್ಚಿಸಿ ಬೆಂಬಲ ಪಡೆಯಬೇಕು. ಖುದ್ದು ದೋವಲ್‌ ಅವರೇ ರಾಜ್ಯ ಪೋಲೀಸ್‌ ಮುಖ್ಯಸ್ಥರೊಂದಿಗೆ ಸಭೆ ನಡೆಸಿದರು.

ಕೇರಳದಲ್ಲಿ ಪ್ರಧಾನಿ ಮೋದಿ ಐಎನ್‌ಎಸ್‌ ವಿಕ್ರಾಂತ್‌ ಉದ್ಘಾಟಿಸುತ್ತಿದ್ದರೆ ಇನ್ನೊಂದೆಡೆ ಅಜಿತ್‌ ದೋವಲ್‌ ನೇತೃತ್ವದ ಅಧಿಕಾರಿಗಳ ತಂಡ ಸಂಪೂರ್ಣ ಯೋಜನೆಯ ಬ್ಲೂ ಪ್ರಿಂಟ್‌ ತಯಾರಿಸಿತು. ಕೇರಳ ಪೋಲೀಸರೊಂದಿಗೆ ಸಭೆ ನಡೆಸಿದ ದೋವಲ್‌ ಪಿಎಫ್‌ಐ ಬೇರುಗಳನ್ನು ನಾಶ ಪಡಿಸುವ ತಂತ್ರ ರೂಪಿಸಿದರು. ಅಲ್ಲಿಂದ ಮಹಾರಾಷ್ಟ್ರದ ರಾಜ್ಯಪಾಲರ ನಿವಾಸದಲ್ಲಿಯೂ ಪೋಲೀಸರೊಂದಿಗೆ ಸಭೆ ನಡೆಸಿದರು. ವ್ವವಸ್ಥಿತ ಯೋಜನೆ ಸಿದ್ಧವಾಯಿತು. ಪಿಎಫ್‌ಐ ಪುಂಡರಿಗೆ ಬೀಸಿ ಬರಲಿರೋ ಚಂಡಮಾರುತದ ಬಗ್ಗೆ ಎಳ್ಳಷ್ಟೂ ಮಾಹಿತಿ ಸಿಗಲಿಲ್ಲ. ಗೃಹ ಸಚಿವ ಅಮಿತ್‌ ಶಾ ನಿರ್ದೇಶನದಂತೆ, ಉರಿ ಸರ್ಜಿಕಲ್ ಸ್ಟ್ರೈಕ್ ನಡೆಸುವಾಗ ಮಾಡಿದ ರೀತಿಯಲ್ಲಿಇಡೀ ಕಾರ್ಯಾಚರಣೆಯನ್ನು ಅತ್ಯಂತ ಗೌಪ್ಯವಾಗಿಡಲಾಯಿತು.

ಡಿ-ಡೇ, ಮೆಗಾ-ಕ್ರ್ಯಾಕ್‌ಡೌನ್:
ಮಧ್ಯರಾತ್ರಿಯಲ್ಲಿ ಜನರು ಹಾಯಾಗಿ ನಿದ್ರಿಸುತ್ತಿದ್ದರೆ ಗುಪ್ತಚರ ಅಧಿಕಾರಿಗಳು ದಾಳಿಗೆ ಸಜ್ಜಾಗಿದ್ದರು. 200 NIA ಅಧಿಕಾರಿಗಳು ಸ್ಥಳೀಯ ಪೋಲೀಸರನ್ನೊಳಗೊಂಡ ವಿವಿಧ ತಂಡಗಳಲ್ಲಿ PFI ಭಯೋತ್ಪಾದಕ ಲಿಂಕ್‌ಗಳ ಮೇಲೆ ಏಕ ಕಾಲದಲ್ಲಿ ದಾಳಿ ನಡೆಸಿದರು. ಸ್ಥಳೀಯ ಪೋಲೀಸರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಾಗಿತ್ತು.

ಭದ್ರತಾ ಏಜೆನ್ಸಿಗಳು ತಮ್ಮ ಎಲ್ಲಾ ಗುರಿಗಳ ಚಟುವಟಿಕೆಗಳ ಮೇಲೆ ತೀವ್ರ ನಿಗಾ ಇರಿಸಿದ್ದರು ಮತ್ತು ಏಕಕಾಲದಲ್ಲಿ ಅವರನ್ನು ಸೆರೆಹಿಡಿಯಲು ಕಾರ್ಯಾಚರಣೆಯನ್ನು ಪ್ರಾರಂಭಿಸಿದರು. ಕಾರ್ಯಾಚರಣೆಯ ಸಂಯೋಜನೆಗೆಂದೇ ದೇಶದಾದ್ಯಂತ 6 ಕಂಟ್ರೋಲ್‌ ರೂಂ ಗಳನ್ನು ತೆರೆಯಲಾಗಿತ್ತು.

ಎನ್‌ಐಎ ನೇತೃತ್ವದಲ್ಲಿ ಇಡಿ, ರಾಜ್ಯ ಪೋಲೀಸರ ಬಹು-ಏಜೆನ್ಸಿ ತಂಡಗಳು ಸೆಪ್ಟೆಂಬರ್ 22 ರಂದು 15 ರಾಜ್ಯಗಳ 93 ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದರು. ದೇಶದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ಬೆಂಬಲಿಸುತ್ತಿದ್ದಾರೆಂದು ಆರೋಪಿಸಿ ಪಿಎಫ್‌ಐನ 106 ಕಾರ್ಯಕರ್ತರನ್ನು ಬಂಧಿಸಲಾಯಿತು. ಇನ್ನೂ ಹಲವಡೆಗಳಲ್ಲಿ ಅನುಮಾನಾಸ್ಪದ ವ್ಯಕ್ತಿಗಳನ್ನೂ ವಶಕ್ಕೆ ಪಡೆಯಲಾಯಿತು.

ಪಿಎಫ್‌ಐ ಗೆ ಭಾರತದ ಭದ್ರತಾ ತಂಡದ ಮಾಸ್ಟರ್‌ ಸ್ಟ್ರೋಕ್‌ ʼಆಪರೇಷನ್‌ ಆಕ್ಟೋಪಸ್‌ʼ ಕೊಂಚವೂ ಗಲಿಬಿಲಿಯಿಲ್ಲದೇ ಯಶಸ್ವಿಯಾಯಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!