Saturday, July 2, 2022

Latest Posts

ಅರಣ್ಯ ಇಲಾಖೆ ಸಿಬ್ಬಂದಿಗಳ ಕಾರ್ಯಾಚರಣೆ: ಕಲ್ಲು ಕ್ವಾರಿಯಲ್ಲಿ‌ ಸಿಲುಕಿಕೊಂಡಿದ್ದ ಕಾಡು ಕೋಣ ಸೇಫ್

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………………..

ಹೊಸ ದಿಗಂತ ವರದಿ, ಶಿವಮೊಗ್ಗ:

ಕಲ್ಲು ಕ್ವಾರಿಯಲ್ಲಿ‌ ಸಿಲುಕಿಕೊಂಡು ಜೀವನ್ಮರಣ‌ ಹೋರಾಟ ನಡೆಸಿದ್ದ ಕಾಡು ಕೋಣವೊಂದನ್ನು ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಜೀವ ಉಳಿಸಿದ್ದಾರೆ.
ಸಾಗರ ತಾಲ್ಲೂಕಿನ ಬೊಮ್ಮತ್ತಿಯಲ್ಲಿ ಕಳೆದ ಎರಡು ದಿನಗಳ ಹಿಂದೆ ಕಾಡುಕೋಣವೊಂದು ಕಲ್ಲು ಕ್ವಾರಿಯಲ್ಲಿ ಬಿದ್ದಿತ್ತು. ಅರಣ್ಯ ಇಲಾಖೆ ವಿನಂತಿಯ ಮೇರೆಗೆ ಪಶು ತಜ್ಞರಾದ ಡಾ.ವಿನಯ್, ಡಾ.ಸುಜಯ್ ಹಾಗೂ ಡಾ.ನಿಖಿತಾ ಅವರ ತಂಡ ಚಿಕಿತ್ಸೆ ನೀಡಿದ್ದರು. ಇನ್ನೊಂದು ಕೋಣದ ಜೊತೆ ನಡೆದ ಭೀಕರ ಕದನದಲ್ಲಿ ಎರಡು ಕಣ್ಣುಗಳನ್ನು ಈ ಕೋಣ ಕಳೆದುಕೊಂಡಿತ್ತು.
ಕಣ್ಣಿಲ್ಲದೆ ಕಾಡಿನಲ್ಲಿ ಬದುಕುವ ಸಾಧ್ಯತೆ ತೀರಾ ಕಡಿಮೆ ಎಂಬ ಹಿನ್ನೆಲೆಯಲ್ಲಿ ವೈದ್ಯರ ಸಲಹೆಯಂತೆ ಅದನ್ನು ಸೆರೆ ಹಿಡಿದು ಮೃಗಾಲಯಕ್ಕೆ ಸಾಗಿಸುವ ತೀರ್ಮಾನವನ್ನು ಅರಣ್ಯ ಇಲಾಖೆ ಮೇಲಾಧಿಕಾರಿಗಳು ತೆಗೆದುಕೊಂಡರು.
ಅರಣ್ಯ ಇಲಾಖೆ, ವೈದ್ಯರ ತಂಡ ಮತ್ತು ಸಾರ್ವಜನಿಕರ ಸಹಯೋಗದಲ್ಲಿ ಮತ್ತು ಬರುವ ಚುಚ್ಚುಮದ್ದು ನೀಡಿ, ಕ್ರೇನ್ ಮೂಲಕ ಮೇಲಕ್ಕೆ ಎತ್ತಲಾಯಿತು.
ನಂತರ ಶಿವಮೊಗ್ಗದ ತ್ಯಾವರೆಕೊಪ್ಪದ ಹುಲಿ ಸಿಂಹ ಧಾಮಕ್ಕೆ ಸಾಗಿಸಲಾಯಿತು. ಕೆಲವು ದಿನಗಳ ನಂತರದಲ್ಲಿ ಮೈಸೂರು ಮೃಗಾಲಯಕ್ಕೆ ಸಾಗಿಸಲಾಗುವುದು ಎಂದು ಅರಣ್ಯ ಇಲಾಖೆ ಉನ್ನತಾಧಿಕಾರಿಗಳು ತಿಳಿಸಿದ್ದಾರೆ.
ಸಾಗರದ ಡಿ.ಎಫ್.ಒ ಮೋಹನ್ ಕುಮಾರ್, ಎ.ಸಿ.ಎಫ್ ಶ್ರೀಧರ, ಆರ್.ಎಫ್.ಓ. ಪ್ರಮೋದ್ ಡಿ.ಆರ್., ಹಾಗೂ ವೈದ್ಯಕೀಯ ತಂಡದ ಡಾ.ವಿನಯ್, ಡಾ.ಸುಜಯ್, ಡಾ.ನಿಖಿತಾ, ಐ.ಯು.ಸಿ.ಎನ್. ಸದಸ್ಯ ಮತ್ತು ಮಾಜಿ ವನ್ಯಜೀವಿ ಮಂಡಳಿ ಸದಸ್ಯ ವಿನಾಯಕ, ಸಾಗರದ ಸ್ವಾನ್ ಅಂಡ್ ಮ್ಯಾನ್ ಸಂಸ್ಥೆಯ ಅಖಿಲೇಶ್ ಚಿಪ್ಪಳಿ ಮತ್ತು ಡಿ.ಆರ್.ಎಫ್.ಓ ಸುಂದರಮೂರ್ತಿ, ಅಣ್ಣಪ್ಪ ಮುಂತಾದವರು ಭಾಗವಹಿಸಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss