Sunday, August 14, 2022

Latest Posts

ಚುನಾವಣಾ ಗುರುತು ಚೀಟಿ ಡೌನ್‍ಲೋಡ್ ಮಾಡಿಕೊಳ್ಳಲು ಅವಕಾಶ

ಹೊಸ ದಿಗಂತ ವರದಿ, ಮಡಿಕೇರಿ:

ಕಳೆದ ಸಾಲಿನ ನವೆಂಬರ್ 18 ರಿಂದ 2021ರ ಜ.18 ರವರೆಗೆ ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾದ ಹೊಸ ಮತದಾರರು
ಇ-ಎಪಿಕ್(e-EPIC)) ಡೌನ್ ಲೋಡ್ ಮಾಡಲು ಚುನಾವಣಾ ಆಯೋಗ ಸೂಚಿಸಿದೆ.
ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾದ ಹೊಸ ಮತದಾರರಿಗೆ ಮಾರ್ಚ್ 6 ಮತ್ತು 7ರಂದು ಬೂತ್ ಮಟ್ಟದ ಅಧಿಕಾರಿಗಳು, ಮೇಲ್ವಿಚಾರಕರು ತಮ್ಮ ಮತಗಟ್ಟೆ ವ್ಯಾಪ್ತಿಯಲ್ಲಿ ವಿಶೇಷ ಅಭಿಯಾನ ಹಮ್ಮಿಕೊಂಡು ಇ-ಎಪಿಕ್ ಡೌನ್‍ಲೋಡ್ ಮಾಡಲು ಕ್ರಮವಹಿಸಲಾಗಿದೆ.
ಆದ್ದರಿಂದ ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾದ ಹೊಸ ಮತದಾರರು ಮಾ. 6 ಮತ್ತು 7 ರಂದು ತಮ್ಮ ಮತಗಟ್ಟೆಯ
ಬೂತ್ ಮಟ್ಟದ ಅಧಿಕಾರಿಯನ್ನು ಸಂಪರ್ಕಿಸಿ ತಮ್ಮ ಇ-ಎಪಿಕ್ ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ. ಅಥವಾ ಹೊಸ
ಮತದಾರರು ತಾವೇ www.nvsp.in, Voter helpline Mobile App ಮತ್ತು https://volerportal.eci.gov.in/ ಮುಖಾಂತರ ಇ-ಎಪಿಕ್ ಡೌನ್‍ಲೋಡ್ ಮಾಡಿಕೊಳ್ಳಬಹುದಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ
ಚಾರುಲತಾ ಸೋಮಲ್ ಅವರು ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss