spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, October 16, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

 ಇಂದಿನಿಂದ 11 ದಿನಗಳ ಕಾಲ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಪಕ್ಷಗಳ ಪ್ರತಿಭಟನೆ

- Advertisement -Nitte

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಇಂದಿನಿಂದ 11 ದಿನಗಳ ಕಾಲ ಹತ್ತೊಂಬತ್ತು ವಿರೋಧ ಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ದೇಶಾದ್ಯಂತ ಪ್ರತಿಭಟನೆ ನಡೆಸಲಿವೆ.

ಮೋದಿ ಸರ್ಕಾರದ ಮುಂದೆ 11 ಅಂಶಗಳ ಬೇಡಿಕೆ ಪಟ್ಟಿ ಸಲ್ಲಿಸಿರುವ ಪ್ರತಿಪಕ್ಷಗಳು, ಮುಂಗಾರು ಅಧಿವೇಶನ ವಾಶ್ ಔಟ್ ನ್ನು ಖಂಡಿಸಿದ್ದಾರೆ.

ಆಗಸ್ಟ್ ನಲ್ಲಿ ನಡೆದ ವಾಸ್ತವಿಕ ಸಭೆಯಲ್ಲಿ, ವಿರೋಧ ಪಕ್ಷಗಳು 2024 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಒಗ್ಗಟ್ಟಿನಿಂದ ಮುಂದುವರಿಯುವುದಾಗಿ ಒತ್ತಿ ಹೇಳಿದರು.

ನೂತನ ಕೃಷಿ ಕಾಯ್ದೆ ರದ್ದುಗೊಳಿಸುವುದು, ಪೆಗಾಸಸ್ ಹ್ಯಾಕಿಂಗ್ ವಿವಾದದ ಬಗ್ಗೆ ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯ ತನಿಖೆ, ಜಮ್ಮು ಮತ್ತು ಕಾಶ್ಮೀರದಲ್ಲಿ ಶೀಘ್ರ ಚುನಾವಣೆಗಳು ಮತ್ತು ಅಲ್ಲಿನ ಎಲ್ಲಾ ರಾಜಕೀಯ ಬಂಧಿತರನ್ನು ಬಿಡುಗಡೆ, ರಫೇಲ್ ಒಪ್ಪಂದದ ಬಗ್ಗೆ ಉನ್ನತ ಮಟ್ಟದ ತನಿಖೆ ಸೇರಿದಂತೆ ಬೇಡಿಕೆಗಳು ಸೇರಿವೆ.

ದೇಶದ ಜಾತ್ಯಾತೀತ, ಪ್ರಜಾಸತಾತ್ಮಕ ಮತ್ತು ಗಣರಾಜ್ಯದ ರಕ್ಷಣೆಗಾಗಿ ಏದ್ದೇಳುವಂತೆ ಜನರಿಗೆ 19 ಪ್ರತಿಪಕ್ಷಗಳ ಮುಖಂಡರು ಕರೆ ನೀಡಿವೆ.

 

 

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss