ಇತ್ತ ಬೇಷರಂ ರಂಗ್ ಹಾಡಿಗೆ ವಿರೋಧ: ಅತ್ತ ಕತಾರ್ ಫ್ಲೈಟ್ ಹತ್ತಿದ ದೀಪಿಕಾ ಪಡುಕೋಣೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಯ ಪಠಣ್ ಸಿನಿಮಾದ ಬೇಷರಂ ರಂಗ್ ಹಾಡಿಗೆ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದ್ದು, ಈ ಹಾಡನ್ನು ಅಶ್ಲೀಲವಾಗಿ ಚಿತ್ರಿಸಲಾಗಿದೆ, ದೀಪಿಕಾ ಸಿಕ್ಕಾಪಟ್ಟೆ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ ಎಂದು ದೇಶದೆಲ್ಲೆಡೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.

ಇದರ ನಡುವೆ ದೀಪಿಕಾ ಪಡುಕೋಣೆ ಏರ್ಪೋರ್ಟ್ ನಲ್ಲಿ ಕಾಣಿಸಿಕೊಂಡಿದ್ದು, ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇತ್ತ ವಿವಾದಗಳು ಜೋರಾಗುತ್ತಿದ್ದರೆ ಅತ್ತ ದೀಪಿಕಾ ಕತಾರ್‌ಗೆ ಹೊರಟಿದ್ದಾರೆ ಎಂದು ಹೇಳಲಾಗಿದೆ.ಅಂದಹಾಗೆFIFA ವಿಶ್ವಕಪ್ 2022 ಟ್ರೋಫಿಯನ್ನು ಅನಾವರಣಗೊಳಿಸಲು ದೀಪಿಕಾ ಕತಾರ್‌ಗೆ ಹೋಗುತ್ತಿದ್ದಾರೆ. ದೀಪಿಕಾ ತುಂಬಾ ಖುಷಿ ಖುಷಿಯಿಂದ ಕತಾರ್ ಫ್ಲೈಟ್ ಹತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!