ಒರಳು ಚಿತ್ರಾನ್ನವನ್ನ ಹೀಗೂ ಮಾಡಬಹುದು..

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 
ಎರಡು ಲೋಟ ಬೆಳ್ತಿಗೆ ಅಕ್ಕಿಯನ್ನು(ನಿಮಗಿಷ್ಟವಾದ) ಚೆನ್ನಾಗಿ ತೊಳೆದು ಸಾಕಷ್ಟು ನೀರು ಸೇರಿಸಿ ಕುಕ್ಕರಿನಲ್ಲಿ ಬೇಯಲಿಡಿ. ಜೊತೆಗೆ ಅರ್ಧ ಟೀ ಸ್ಪೂನ್ ಅರಶಿನ ಹುಡಿ, ಒಂದು ಟೀ ಸ್ಪೂನ್ ಉಪ್ಪು ಸೇರಿಸುವುದನ್ನು ಮರೆಯದಿರಿ. ಎರಡು ಟೀ ಸ್ಪೂನ್ ಶುದ್ದ ತೆಂಗಿನೆಣ್ಣೆಯನ್ನು ಹಾಕಿ. ಇದರಿಂದ ಅನ್ನ ಮುದ್ದೆಯಾಗುವುದಿಲ್ಲ.

ಒಂದು ತೆಂಗಿನಕಾಯಿಯನ್ನು ತುರಿದಿಟ್ಟುಕೊಳ್ಳಿ. ಎರಡು ಕೆಂಪು ಮೆಣಸು, ನೆಲ್ಲಿಕಾಯಿಗಾತ್ರದಲ್ಲಿ ಹುಣಸೆಹುಳಿ, ನಾಲ್ಕು ಎಸಳು ಬೇವು, ಉದ್ದಿನಬೇಳೆ,ಅರ್ಧ ಟೀ ಸ್ಪೂನ್ ಸಾಸಿವೆ, ಸ್ವಲ್ಪ ಕೊತ್ತಂಬರಿ ಹಾಕಿ ಹುರಿದಿಟ್ಟುಕೊಳ್ಳಿ. ಇವುಗಳನ್ನು ತೆಂಗಿನ ತುರಿಯೊಂದಿಗೆ ಸೇರಿಸಿ ನುಣ್ಣಗೆ ರುಬ್ಬಿ. ಕುಕ್ಕರಿನಲ್ಲಿಟ್ಟ ಅನ್ನ ಬೆಂದ ನಂತರ ಬಾಣಲೆಯಲ್ಲಿ ತೆಂಗಿನೆಣ್ಣೆ ಹಾಕಿ ಬಿಸಿಮಾಡಿ, ನಂತರ ಮಿಕ್ಸಿಯಲ್ಲಿದ್ದ ಮಸಾಲೆ ಸೇರಿಸಿ, ಕುಕ್ಕರಿನಲ್ಲಿದ್ದ ಅನ್ನವನ್ನು ಸೇರಿಸಿ ಸರಿಯಾಗಿ ಮಿಕ್ಸ್ ಮಾಡಿಕೊಳ್ಳಿ. ಶೇಂಗಾ ಸೇರಿಸಿ ಒಗ್ಗರಣೆ ಕೊಡಿ. ರುಚಿ ರುಚಿಯಾದ ಚಿತ್ರಾನ್ನ ರೆಡಿ!

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!