ಅಂಗಾಂಗ ದಾನ: ಎರಡನೇ ಸ್ಥಾನದಲ್ಲಿ ಕರ್ನಾಟಕ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಅಂಗಾಂಗ ದಾನದಂತಹ ಮಹತ್ವದ ಕಾರ್ಯದಲ್ಲಿ ಕರ್ನಾಟಕವು ಎರಡನೇ ಸ್ಥಾನದಲ್ಲಿದೆ.

2022 ಡಿಸೆಂಬರ್ 14 ವರೆಗಿನ ದಾಖಲೆ ಸಂಖ್ಯೆಯ ಆಧಾರದ ಮೇಲೆ 143 ಅಂಗಾಂಗ ದಾನ ಮಾಡಲಾಗಿದ್ದು, ಇದರಿಂದ ಸುಮಾರು 397 ಜನರಿಗೆ ಅಂಗಾಂಗಗವನ್ನು ನೀಡಿ ಅವರಿಗೆ ಹೊಸ ಜೀವನವನ್ನು ನಡೆಸುತ್ತಿದ್ದಾರೆ.

ಇನ್ನು ತೆಲಂಗಾಣ ನಂತರ ದಕ್ಷಿಣದ ರಾಜ್ಯಗಳಲ್ಲಿ ಅಂಗಾಂಗ ದಾನದಲ್ಲಿ ಎರಡನೇ ಸ್ಥಾನವನ್ನು ಕರ್ನಾಟಕ ಪಡೆದುಕೊಂಡಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಕೆ ಸುಧಾಕರ್ ಹೇಳಿದ್ದಾರೆ.

ಹಿಂದಿನ ವರ್ಷ ಕರ್ನಾಟಕದಲ್ಲಿ 70 ಅಂಗಾಂಗ ದಾನಗಳು ದಾಖಲಿಸಿಲಾಗಿತ್ತು.

ವಿಶೇಷವಾಗಿ ದಕ್ಷಿಣ ಕನ್ನಡದಲ್ಲಿ 2021ಕ್ಕೆ ಹೋಲಿಸಿದ್ದರೆ, 2022 ರಲ್ಲಿ ನಾಲ್ಕರಿಂದ ಅಂಗಾಂಗ ದಾನಗಳ ಸಂಖ್ಯೆ 15 ಕ್ಕೆ ಏರಿಕೆ ಕಂಡಿದೆ. ಇದರಲ್ಲಿ 95 ಪ್ರತಿಶತದಷ್ಟು ಮೆದುಳು ನಿಷ್ಕ್ರಿಯಗೊಂಡ ರೋಗಿಗಳ ಕುಟುಂಬದ ಸದಸ್ಯರು ಅಂಗಾಂಗ ದಾನದಂತಹ ಮಹತ್ತರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಇದರಿಂದಾಗಿ 72 ಜನರ ಜೀವಗಳನ್ನು ಉಳಿಸಲಾಯಿತು.

ಅನೇಕರಿಗೆ ಜೀವನದ ಈ ಉಡುಗೊರೆಯನ್ನು ಒದಗಿಸಿದ್ದಕ್ಕಾಗಿ ನಾನು ಪ್ರತಿ ದಾನಿ ಕುಟುಂಬಕ್ಕೆ ಧನ್ಯವಾದ ಹೇಳಲು ಬಯಸುತ್ತೇನೆ. ಸಂಕಷ್ಟದ ಪರಿಸ್ಥಿತಿಯ ನಡುವೆಯೂ ಈ ಕುಟುಂಬಗಳು ಮತ್ತೊಂದು ಜೀವ ಉಳಿಸಲು ಮುಂದಾಗಿರುವುದು ಶ್ಲಾಘನೀಯ ಎಂದು ಡಾ.ಸುಧಾಕರ್ ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!