VIRAL VIDEO| ಆಸ್ಕರ್‌ ವೇದಿಕೆಯಲ್ಲಿ ʻನಾಟು ನಾಟುʼ ಮಾಸ್‌ ಸ್ಟೆಪ್ಸ್ ಮೂಲಕ ಕುಣಿದು ಕುಪ್ಪಳಿಸಿದ ನೃತ್ಯಗಾರರು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ನಾಟು ನಾಟು ಮಾಸ್‌ ಸ್ಟೆಪ್ಸ್‌ಗೆ ಲಾಸ್ ಏಂಜಲೀಸ್‌ನಲ್ಲಿರುವ ಡಾಲ್ಬಿ ಥಿಯೇಟರ್ ಆಸ್ಕರ್‌ ವೇದಿಕೆ ಸಾಕ್ಷಿಯಾಯಿತು. ಗಾಯಕ ರಾಹುಲ್ ಸಿಪ್ಲಿಗಂಜ್ ಹಾಗೂ ಕಾಲಭೈರವನ ‘ನಾಟು ನಾಟು’ ಹಾಡಿನ ಲೈವ್ ಪರ್ಫಾರ್ಮೆನ್ಸ್ ರೆಪ್ಪೆ ಮುಚ್ಚದಂತೆ ನೋಡುವಂತಿದೆ. ಇಬ್ಬರೂ ಹಾಡುತ್ತಿರುವಾಗಲೇ ಅಮೆರಿಕದ ಡ್ಯಾನ್ಸರ್‌ಗಳು ವೇದಿಕೆಯಲ್ಲಿ ನೇರ ಪ್ರದರ್ಶನ ನೀಡಿದರು. ಪಲ್ಲವಿ ಮತ್ತು ಹಾಡಿನ ಎರಡನೇ ಚರಣವನ್ನು ಹಾಡುವ ಮೂಲಕ ಹಾಡನ್ನು ಕೊನೆಗೊಳಿಸಿದರು. ರಾಹುಲ್ ಸಿಪ್ಲಿಗಂಜ್ ಮತ್ತು ಕಾಲಭೈರವ ಹಾಡಿದ ನಾಟು ನಾಟು ಹಾಡು ಹಾಡುತ್ತಿದ್ದಂತೆ ಅತಿಥಿಗಳು ಸಮಾರಂಭದಲ್ಲಿ ಎದ್ದು ನಿಂತು ಚಪ್ಪಾಳೆ ತಟ್ಟಿದರು.

ಈ ಪ್ರದರ್ಶನದ ವಿಡಿಯೋವನ್ನು RRR ತಂಡವು ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ಹಂಚಿಕೊಂಡಿದ್ದು, ಇದೀಗ ಅದು ವೈರಲ್ ಆಗುತ್ತಿದೆ. ಮತ್ತೊಂದೆಡೆ ಭಾರತೀಯ ಹಾಡಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಸಿಗುತ್ತಿರುವುದಕ್ಕೆ ಭಾರತೀಯ ಪ್ರೇಕ್ಷಕರು ಸಂತಸ ವ್ಯಕ್ತಪಡಿಸುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!