ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಸನಗೌಡ ಪಾಟೀಲ್ ಯತ್ನಾಳ್ ಅವರು ಹೊಸ ಪಕ್ಷ ಕಟ್ಟುವುದು ಶುದ್ಧ ಸುಳ್ಳು. ಅವರ ಸಿದ್ಧಾಂತ, ಹೋರಾಟ ಬಿಜೆಪಿಗೇ ಸೂಟ್ ಆಗುತ್ತದೆ. ನಮ್ಮ (ಕಾಂಗ್ರೆಸ್) ಸಿದ್ಧಾಂತಗಳು ಅವರಿಗೆ ಸೂಟ್ ಆಗಲ್ಲ ಎಂದು ಹೇಳುವ ಮೂಲಕ ಯತ್ನಾಳ್ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಎದ್ದಿರುವ ಊಹಾಪೋಹಗಳಿಗೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ತೆರೆ ಎಳೆದಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಯತ್ನಾಳ್‌ಗೆ ಬಿಜೆಪಿ ಮತ್ತು ಬಿಜೆಪಿಗೆ ಯತ್ನಾಳ್ ಅನಿವಾರ್ಯ ಬಹಳಷ್ಟಿದೆ ಎಂದು ಹೇಳಿದರು.
ಇದೇ ವೇಳೆ, ಬೆಲೆ ಏರಿಕೆ ವಿರುದ್ಧ ಬಿಜೆಪಿ ಹಮ್ಮಿಕೊಂಡಿರುವ ಪ್ರತಿಭಟನೆ ಕುರಿತು ಪ್ರತಿಕ್ರಿಯಿಸಿ, ಬಿಜೆಪಿ ಆಡಳಿತದ ಅವಧಿಯಲ್ಲಿಯೇ ಬೆಲೆ ಏರಿಕೆ ಆಗಿದೆ. ಹೀಗಾಗಿ, ಈಗ ಪ್ರತಿಭಟನೆ ಅನಗತ್ಯ. ಅದನ್ನು ರಾಜಕೀಯವಾಗಿ ಬಳಸಿಕೊಳ್ಳಬಾರದು. ಬೆಲೆ ಏರಿಕೆ ವಿಷಯದ ಬಗ್ಗೆ ಆಯಾ ಇಲಾಖೆಗಳು ಸ್ಪಷ್ಪನೆ ನೀಡಬೇಕಿದೆ ಎಂದು ಹೇಳಿದರು.