Monday, July 4, 2022

Latest Posts

ನಮ್ಮ ನಾಯಕರು ಯಾವುದೇ ತಪ್ಪು ಮಾಡಿಲ್ಲ, ನ್ಯಾಯಕ್ಕಾಗಿ ನಾವು ಹೋರಾಡುತ್ತೇವೆ: ಡಿ.ಕೆ.ಶಿವಕುಮಾರ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ನಮ್ಮ ನಾಯಕರು ಯಾವುದೇ ತಪ್ಪು ಮಾಡಿಲ್ಲ. ಅವರ ಪರ ನ್ಯಾಯಕ್ಕಾಗಿ ನಾವು ಹೋರಾಡುತ್ತಿದ್ದೇವೆ. ಪ್ರತಿಭಟನೆ ಮಾಡೋದು ನಮ್ಮ ಹಕ್ಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ರಾಹುಲ್ ಗಾಂಧಿ, ಸೋನಿಯಾಗಾಂಧಿ ಯಾವುದಕ್ಕೂ ಜಗ್ಗಲ್ಲ. ಅದು ರಾಷ್ಟ್ರದ ಆಸ್ತಿ, ಸ್ವಂತದ್ದಲ್ಲ. ಅವ್ರನ್ನು ಏನಾದ್ರೂ ಮಾಡಿ ಮನೆಗೆ ಸೇರಿಸಬೇಕು ಎಂದುಕೊಂಡಿದ್ದಾರೆ ಎಂದರು.
ನಮಗೆ ನಮ್ಮ ಕಚೇರಿಯೇ ನಮ್ಮ ಮನೆ, ದೇವಸ್ಥಾನ. ಹೆಚ್.ಕೆ‌.ಪಾಟೀಲ್, ಡಿ.ಕೆ. ಸುರೇಶ್, ದಿನೇಶ್ ಗುಂಡೂರಾವ್ ಕಚೇರಿಗೆ ಹೋದ್ರೆ ಬಂಧನ ಮಾಡಿದ್ದಾರೆ. ಏನಿದು ಅನ್ಯಾಯ, ಅವರೇನು ಕ್ರೈಂ ಮಾಡಿದ್ದಾರೆ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
10 ಗಂಟೆ ವಿಚಾರಣೆ ಯಾಕೆ? ಚುನಾವಣೆ ಅಫಿಡಿವಿಡ್​ನಲ್ಲಿ ಕೊಟ್ಟಿಲ್ಲವಾ? ನಾನೇನು ಮಾಡಬಾರದು ಮಾಡಿಬಿಟ್ಟಿದ್ದೆ. ಹತ್ತು ದಿನ ನನ್ನ ವಿಚಾರಣೆ ಮಾಡಬೇಕಾ? ನಾನು ಇನ್ನೂ ಕೆಲ ವಿಚಾರ ಮಾತನಾಡಿಲ್ಲ. ಯಾವ ಯಾವ ರೀತಿಯಲ್ಲಿ ಕಿರುಕುಳ ಕೊಟ್ಟಿದ್ದಾರೆ‌ ಎಂದು ಹೇಳಿಲ್ಲ. ರೇಡ್​ ಆದಾಗ ಬಿಜೆಪಿಯವರದ್ದು ಯಾರ ಯಾರದ್ದು ಏನು ಆಯಿತು. ಎಷ್ಟೆಷ್ಟು ಹಣ ಸಿಕ್ತು?. ಯಾಕೆ ಇಡಿಗೆ ಕೇಸ್ ಹೋಗಿಲ್ಲ ಎಂದು ಪ್ರಶ್ನಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss