ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಧಾನಿ ಬೆಂಗಳೂರಿನಲ್ಲಿ ನಮ್ಮ ಮೆಟ್ರೋದ ಎರಡನೇ ಹಂತದ ಕಾಮಗಾರಿ ನಡೆಯುತ್ತಿದೆ. 100 ದಿನಗಳಲ್ಲಿ ಬರೋಬ್ಬರಿ 718 ಮೀಟರ್ ಸುರಂಗ ಕೊರೆದು ಟಿಬಿಎಂ ರುದ್ರ ಹೊರಬಂದಿದೆ.
100 ದಿನಗಳ ಹಿಂದೆ ಭೂಗರ್ಭದಲ್ಲಿ ಸುರಂಗ ಕೊರೆಯಲು ಆರಂಭಿಸಿದ ರುದ್ರ ಇದೀಗ ಗುರುವಾರ ಯಶಸ್ವಿಯಾಗಿ ಹೊರಬಂದಿದೆ. ಬರೋಬ್ಬರಿ 718 ಮೀಟರ್ ಸುರಂಗ ಕೊರೆದು ಲ್ಯಾಂಗ್ ಫೋರ್ಡ್ ನಿಲ್ದಾಣದ ಬಳಿ ಹೊರ ಬಂದಿದೆ.
ಲಕ್ಕಸಂದ್ರದಿಂದ ಲ್ಯಾಂಗ್ ಫೋರ್ಡ್‌ವರೆಗಿನ ಎರಡನೇ ಹಂತದ ಮೆಟ್ರೋ ಸುರಂಗ ಮಾರ್ಗ ಕಾಮಗಾರಿ ನಡೆಯುತ್ತಿದ್ದು, ಇದು ಏಳನೇ ಕಾರ್ಯಾಚರಣೆಯಾಗಿದೆ.
ಈ ಹಿಂದೆ ವಮಿಕಾ ಹೆಸರಿನ ಟಿಬಿಎಂ ಅಗ್ರಹಾರ-ನಾಗರವಾರ ಮಾರ್ಗ ಸುರಂಗ ಕಾಮಗಾರಿಯಲ್ಲಿ 721 ಮೀಟರ್ ಸುರಂಗ ಮಾರ್ಗ ಕೊರೆದಿತ್ತು, ಇನ್ನು ವಿಂಧ್ಯಾ ಹೆಸರಿನ ಟಿಬಿಎಂ ಗೊಟ್ಟಗೆರೆ ನಾಗವಾರ ಮಾರ್ಗವಾಗಿ ನಡೆದಿದ್ದ ಕಾಮಗಾರಿ ವೇಳೆ ಬರೋಬ್ಬರಿ 900 ಮೀಟರ್ ಉದ್ದ ಕಲ್ಲು ಬಂಡೆಗಳನ್ನು ಕೊರೆದಿತ್ತು.