ದೇಶದಲ್ಲಿ 92 ಕೋಟಿಗೂ ಅಧಿಕ ನಕಲಿ ನೋಟುಗಳ ವಶ: ಕೇಂದ್ರ ಸರ್ಕಾರ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ದೇಶದಲ್ಲಿ ನಕಲಿ ನೋಟುಗಳಿಗೆ ಕಡಿವಾಣ ಹಾಕಿದ ಬಳಿಕ 2016ರಿಂದ 2020ರ ಅವಧಿಯಲ್ಲಿ ₹92 ಕೋಟಿಗೂ ಅಧಿಕ ಮೌಲ್ಯದ ನಕಲಿ ನೋಟುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.
ಈ ಕುರಿತು ರಾಜ್ಯಸಭೆಯಲ್ಲಿ ಕೇಂದ್ರ ಸಚಿವ ನಿತ್ಯಾನಂದ ರೈ ಮಾಹಿತಿ ನೀಡಿದ್ದು, ದೇಶದಲ್ಲಿ ನಕಲಿ ನೋಟುಗಳಿಗೆ ಕಡಿವಾಣಕ್ಕೆ 500, 1000 ಮುಖಬೆಲೆಯ ನೋಟು ಚಲಾವಣೆ ರದ್ದು ಮಾಡಲಾಗಿತ್ತು. ಅದಾದ ಬಳಿಕ ಹೊಸ 500, 2000 ರೂ. ಹೊಸ ನೋಟುಗಳು ಮುದ್ರಣಗೊಳ್ಳುತ್ತಿದ್ದು, ಈ ವೇಳೆ ನಕಲಿ​​ ನೋಟುಗಳ ಹಾವಳಿ ಜೋರಾಗಿರುವುದು ಕಂಡುಬಂದಿದೆ.
1967ರ ಕಾಯ್ದೆಯಡಿ ನಕಲಿ ಭಾರತೀಯ ನೋಟುಗಳ ಉತ್ಪಾದನೆ ಮತ್ತು ಕಳ್ಳಸಾಗಣೆ ಹಾಗೂ ಚಲಾವಣೆಯನ್ನು ಭಯೋತ್ಪಾದಕ ಕೃತ್ಯ ಎಂದು ಘೋಷಿಸಲಾಗಿದೆ. ಅದೇ ರೀತಿ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
2016-2020ರ ಅವಧಿಯಲ್ಲಿ 20 ಲಕ್ಷಕ್ಕೂ ಹೆಚ್ಚಿನ ನಕಲಿ ನೋಟುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದ್ದು, ಇದರ ಒಟ್ಟು ಮೌಲ್ಯ 92 ಕೋಟಿ ರೂ. ಎಂದು ಸಚಿವರು ತಿಳಿಸಿದರು. 921,780,480 ರೂಪಾಯಿ ಮೌಲ್ಯದ 2,017,427 ನಕಲಿ ನೋಟು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಹೇಳಿದರು.
2016ರಲ್ಲಿ 15,92,50,181 ರೂಪಾಯಿ ಮೌಲ್ಯದ 2,81,839 ನಕಲಿ ನೋಟು, 2017ರಲ್ಲಿ 28,10,19,294 ರೂಪಾಯಿ ಮೌಲ್ಯದ 3,55,994 ನಕಲಿ ನೋಟು, 2018ರಲ್ಲಿ 17,95,36,992 ಮೌಲ್ಯದ 2,57,243 ನಕಲಿ ನೋಟು, 2019ರಲ್ಲಿ 25,39,09,130 ಮೌಲ್ಯದ 2,87,404 ನಕಲಿ ನೋಟು ಹಾಗೂ 2020ರಲ್ಲಿ 92,17,80,480 ಮೌಲ್ಯದ 8,34,947 ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!