Thursday, August 11, 2022

Latest Posts

ಆಸ್ಪತ್ರೆಯಲ್ಲಿ ಆಮ್ಲಜನಕದ ಕೊರತೆ: ಮೂವರು ಕೋವಿಡ್​​ ರೋಗಿಗಳು ಸಾವು

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………

ಹೊಸದಿಗಂತ ಆನ್ ಲೈನ್ ಡೆಸ್ಕ್:

ಹೈದರಾಬಾದ್​ ಕಿಂಗ್​ ಕೋಟಿ ಆಸ್ಪತ್ರೆಯಲ್ಲಿ ಆಮ್ಲಜನಕದ ಕೊರತೆಯಿಂದಾಗಿ ಮೂವರು ಕೋವಿಡ್​​ ರೋಗಿಗಳು ಸಾವನ್ನಪ್ಪಿದ್ದಾರೆ.
ಕಳೆದ 20 ಗಂಟೆಗಳಿಂದ ಆಮ್ಲಜನಕ ಸಮಸ್ಯೆ ಉದ್ಭವವಾಗಿತ್ತು. ಆಸ್ಪತ್ರೆಗೆ ಆಮ್ಲಜನಕ ಹೊತ್ತು ತರಬೇಕಾಗಿದ್ದ ವಾಹನ ವಿಳಾಸ ಗೊತ್ತಿಲ್ಲದ ಕಾರಣ ಉಸ್ಮಾನಿಯಾ ಆಸ್ಪತ್ರೆಗೆ ತೆರಳಿದೆ. ಆಗ ಅಲ್ಲಿನ ಸಿಬ್ಬಂದಿ ಟ್ಯಾಂಕರ್​ನ್ನ ಕಿಂಗ್ ಕೋಟಿ ಆಸ್ಪತ್ರೆಗೆ ರವಾನಿಸಿದ್ದಾರೆ.
ಆದರೆ ಆಕ್ಸಿಜನ್​ ಸಿಲಿಂಡರ್​ ವಾಹನ ಕಿಂಗ್​ ಕೋಟಿ ಆಸ್ಪತ್ರೆಗೆ ಬರುವ ಹೊತ್ತಿಗೆ ಮೂವರು ಕೋವಿಡ್ ರೋಗಿಗಳ ಪ್ರಾಣ ಹಾರಿಹೋಗಿದೆ.
ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆಮ್ಲಜನಕದ ಸಿಲಿಂಡರ್​ಗಳು ಖಾಲಿ ಆಗುವವರೆಗೆ ಸುಮ್ಮನಿದ್ದು ನಿರ್ಲಕ್ಷ್ಯ ವಹಿಸಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss