Monday, August 15, 2022

Latest Posts

ಭಾರತಕ್ಕೆ ಉಸಿರಾಟದ ಸಂಜೀವಿನಿ ಒದಗಿಸಿದ್ದ ದೇಶಲ್ಲೀಗ ಆಮ್ಲಜನಕದ ಕೊರತೆ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಕೊರೋನಾ ಉಲ್ಬಣದಿಂದ ದೇಶದಲ್ಲಿ ಆಮ್ಲಜನಕದ ಕೊರತೆ ಎದುರಾದಾಗ ಸಾವಿರಾರು ಆಮ್ಲಜನಕದ ಟ್ಯಾಂಕ್ ಒದಗಿಸುವ ಮೂಲಕ ಆಪತ್ಭಾಂದವನಂತೆ ನೆರವಿಗೆ ನಿಂತಿದ್ದ ಇಂಡೋನೇಷ್ಯಾದಲ್ಲೀಗ ಆಮ್ಲಜನಕದ ಕೊರತೆ ಎದುರಾಗಿದೆ.

ಕೋವಿಡ್ ಸೋಂಕಿತರಿಗೆ ಆಮ್ಲಜನಕದ ಕೊರತೆ ಎದುರಾಗಿದೆ. ತುರ್ತು ನೆರವಿಗೆ ಧಾವಿಸುವಂತೆ ಚೀನಾ ಸಿಂಗಪುರ ಸೇರಿದಂತೆ ಇತರೆ ದೇಶಗಳಿಗೆ ಇಂಡೋನೇಷ್ಯಾ ಮನವಿ ಸಲ್ಲಿಸಿತ್ತು. ಇದಕ್ಕೆ ಸ್ವಂದಿಸಿದ ಸಿಂಗಪುರ  1,000 ಆಮ್ಲಜನಕ ಸಿಲಿಂಡರ್‌ಗಳು, ವೆಂಟಿಲೇಟರ್‌ಗಳು ಸೇರಿದಂತೆ  ವೈದ್ಯಕೀಯ ನೆರವಿನ ಉಪಕರಣಗಳನ್ನು ಕಳುಹಿಸಿಕೊಟ್ಟಿದೆ.

ಆಸ್ಟ್ರೇಲಿಯಾ ಮತ್ತೊಂದು ಹಂತದಲ್ಲಿ ಸಿಂಗಪುರ ಪ್ರಮಾಣದಲ್ಲಿಯೇ ನೆರವು ನೀಡಲಿದೆ. ಹಾಗೆಯೇ ಚೀನಾ, ಅಮೆರಿಕ ಮತ್ತು ಅರಬ್‌ ರಾಷ್ಟ್ರಗಳು ಕೂಡ ನೆರವು ನೀಡುವುದಾಗಿ ತಿಳಿಸಿವೆ ಎಂದು ಇಂಡೋನೇಷ್ಯಾದ ಕೋವಿಡ್‌ ನಿರ್ವಹಣಾ ಸಚಿವ ಲುಹುಟ್‌ ಬಿನ್‌ಸಾರ್‌ ಪಂಡ್‌ಜೈತನ್‌ ತಿಳಿಸಿದ್ದಾರೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss