Friday, July 1, 2022

Latest Posts

ಕೈಕೊಟ್ಟ ಆಕ್ಸಿಜನ್ ಘಟಕ: ಅಧಿಕಾರಿಗಳಿಗೆ ಸಚಿವರಿಂದ ತರಾಟೆ

ಹೊಸ ದಿಗಂತ ವರದಿ, ಮಂಡ್ಯ:

ಮಿಮ್ಸ್ ಆವರಣದಲ್ಲಿ ಸ್ಥಾಪಿಸಲಾಗಿದ್ದ ಆಕ್ಸಿಜನ್ ಘಟಕದ ಚಾಲನೆಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ. ನಾರಾಯಣಗೌಡ ಯಂತ್ರದ ಗುಂಡಿ ಒತ್ತಿದರೂ ಚಾಲನೆ ಆಗದೆ ಕೆಲ ಕಾಲ ಗೊಂದಲ ಉಂಟಾಗಿತ್ತು. ಇದರಿಂದ ಅಸಮಾಧಾನ ವ್ಯಕ್ತಪಡಿಸಿದ ಸಚಿವರು ಅಧಿಕಾರಿಗಳನ್ನು ತೀವ್ರ ತರಾಟೆಗೆತೆಗೆದುಕೊಂಡರು.
ಬುಧವಾರ ರಾತ್ರಿ ಪ್ರಾಯೋಗಿಕವಾಗಿ ನಡೆಸಿದಾಗ ಸರಿಯಾಗಿ ಚಾಲನೆಯಾಗಿದೆ. ಆದರೆ ಈಗ ಚಾಲನೆ ಮಾಡಿದರೂ ಆಗುತ್ತಿಲ್ಲ. ಇದಕ್ಕೆ ಏನು ಕಾರಣ, ಲಕ್ಷಾಂತರ ರೂ.ಖರ್ಚು ಮಾಡಿ ಪೂರ್ವ ತಯಾರಿ ಇಲ್ಲದೆ ಆತುರಾತುರವಾಗಿ ಘಟಕ ಪ್ರಾರಂಭಿಸುವ ಅಗತ್ಯವೇನಿತ್ತು ಪ್ರಶ್ನಿಸಿದರು.
ಸಂಬಂಧಿಸಿದ ಗುತ್ತಿಗೆದಾರರನ್ನು ಕರೆಸಿ ತಕ್ಷಣ ದುರಸ್ಥಿಪಡಿಸುವಂತೆ ಮಿಮ್ಸ್ ನಿರ್ದೇಶಕ ಡಾ. ಎಂ.ಆರ್. ಹರೀಶ್ ಅವರಿಗೆ ಸೂಚಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss