ಈಡಿಗ ಸಮಾಜಕ್ಕೆ ಸೌಲಭ್ಯಕ್ಕಾಗಿ ಜನವರಿಯಲ್ಲಿ ಪಾದಯಾತ್ರೆ: ಸ್ವಾಮಿ ಪ್ರಣವಾನಂದ

ಹೊಸದಿಗಂತ ವರದಿ,ಶಿವಮೊಗ್ಗ:

ರಾಜ್ಯದಾದ್ಯಂತ 7೦ ಲಕ್ಷಕ್ಕೂ ಹೆಚ್ಚು ಜನ ಸಂಖ್ಯೆ ಹೊಂದಿರುವ  ಈಡಿಗ ಸಮುದಾಯಕ್ಕೆ  ಸರ್ಕಾರ  ಸೂಕ್ತ ಸ್ಥಾನಮಾನವನ್ನು ಕಲ್ಪಿಸುವಲ್ಲಿ ವಿಫಲವಾಗಿದೆ ಎಂದು ಬ್ರಹ್ಮಶ್ರೀ ನಾರಾಯಣಗುರು ಶಕ್ತಿಪೀಠ (ಕಲಬುರಗಿ) ಪೀಠಾಧ್ಯಕ್ಷ ಶ್ರೀ ಪ್ರಣವಾನಂದ ಸ್ವಾಮಿ ತಿಳಿಸಿದರು
ಬುಧವಾರ ಸೊರಬ ಪಟ್ಟಣದ ಪ್ರವಾಸಿ ಮಂದಿರದಲ್ಲಿ  ಪತ್ರಿಕಾಗೋಷ್ಠಿಯಲ್ಲಿ  ಮಾತನಾಡಿದ ಅವರು,    ಈಡಿಗ ಬಿಲ್ಲವ ನಾಮಧಾರಿ ಜನಾಂಗ ಸೇರಿದಂತೆ ಸಮಾಜದ ಬೇಡಿಕೆಗಳ ಈಡೇರಿಕೆಗಾಗಿ ಕುದ್ರೋಳಿ  ಕ್ಷೇತ್ರದಿಂದ ಬೆಂಗಳೂರಿನ ವಿಧಾನಸೌಧದವರೆಗೆ ಜನವರಿ 06 ರಿಂದ ಪಾದಯಾತ್ರೆ ಹಮ್ಮಿಕೊಳ್ಳುಲಾಗಿದೆ ಎಂದು ತಿಳಿಸಿದರು.

ರಾಜ್ಯದ ಮಂಗಳೂರು, ಉಡುಪಿ,ಕಾರವಾರ. ಶಿವಮೊಗ್ಗ, ಗುಲ್ಬರ್ಗ, ಯಾದಗಿರಿ.  ಕೊಪ್ಪಳ, ರಾಯಚೂರು,ಭಾಗಗಳಲ್ಲಿ ಈಡಿಗ  ಸಮುದಾಯದ  ಜನರು ಹೆಚ್ಚಾಗಿದ್ದುರೆ, ಈಡಿಗ   ಸಮುದಾದಿಂದ 7 ಜನ ಶಾಸಕರು 2 ಜನ ಮಂತ್ರಿಗಳಿದ್ದರೂ ಸಮುದಾಯದ ಬಗ್ಗೆ ಯಾವುದೇ ಕಾಳಜಿ ಹೊಂದಿಲ್ಲ.ರಾಜ್ಯದಲ್ಲಿ ನಾರಾಯಣ  ಗುರು ಅಭಿವೃದ್ಧಿ ನಿಗಮ ಸ್ಥಾಪಿಸುವಂತೆ  ಹೋರಾಟ ಮಾಡಲಾಗುವುದು ಎಂದು ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!