ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..
ಹೊಸದಿಗಂತ ಆನ್ ಲೈನ್ ಡೆಸ್ಕ್:
ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತದ ಟೇಬಲ್ ಟೆನ್ನಿಸ್ ಆಟಗಾರ್ತಿ ಭಾವಿನಾ ಪಟೇಲ್ ಮಹಿಳಾ ಸಿಂಗಲ್ಸ್ ನಲ್ಲಿ ಚೀನಾದ ಮಿಯಾನವೋ ಝಾಂಗ್ ಅವರನ್ನು ಸೋಲಿಸಿ ಫಿನಾಲೆಗೆ ಲಗ್ಗೆ ಇಟ್ಟಿದ್ದಾರೆ. ಇದರಿಂದ ಚಿನ್ನದ ಪದಕ ಗೆಲ್ಲುವ ಹಂತಕ್ಕೆ ತಲುಪಿದ್ದಾರೆ.
ಸೆಮಿಫೈನಲ್ಸ್ ನಲ್ಲಿ ಚೀನಾದ ಮಿಯಾವೋ ಅವರನ್ನು 3-2 ಅಂತರದಲ್ಲಿ ಸೋಲಿಸಿ, ಭಾವಿನಾ ಪಟೇಲ್ ಫೈನಲ್ಸ್ ಪ್ರವೇಶಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಫಿನಾಲೆ ಪಂದ್ಯವಾಡಲು ನಾನು ಮಾನಸಿಕವಾಗಿ ಸಿದ್ಧಳಿದ್ದೇನೆ. ನಾನು ಪೂರ್ಣಶ್ರಮದಿಂದ ಆಡುತ್ತೇನೆ ಎಂದಿದ್ದಾರೆ.
34 ನಿಮಿಷಗಳ ಕಾಲ ನಡೆದ ಸೆಮಿಫೈನಲ್ಸ್ ನಲ್ಲಿ ಮಿಯಾನವೋ ಝಾಂಗ್ ಅವರನ್ನು7-11, 11-7, 11-4,9-11,11-8ಅಂತರದಲ್ಲಿ ಸೋಲಿಸಿ ಭಾರತಕ್ಕೆ ಪದಕದ ಗಳಿಸುವ ಕನಸು ಹೊತ್ತಿದ್ದಾರೆ